ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಿರುದ್ಧ ಹೋರಾಟ: ಜನತಾ ಕರ್ಫ್ಯೂ ಬಗ್ಗೆ ನೀವು ತಿಳಿದಿರಬೇಕಾದ 5 ಅಂಶಗಳು

Last Updated 22 ಮಾರ್ಚ್ 2020, 2:07 IST
ಅಕ್ಷರ ಗಾತ್ರ

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನೀಡಿದ ಜನತಾ ಕರ್ಫ್ಯೂ ಆಹ್ವಾನವನ್ನು ಧನಾತ್ಮಕವಾಗಿ ಜನರು ಸ್ವೀಕರಿಸಿಕೊಂಡಿದ್ದು, ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮನೆಯೊಳಗೇ ಇರಲು ನಿರ್ಧರಿಸಿದ್ದಾರೆ.

ಏನಿದು ಜನತಾ ಕರ್ಫ್ಯೂ? ನೀವೇನು ಮಾಡಬೇಕು

1. ಕೊರೊನಾ ವೈರಾಣು ಹರಡದಂತೆ ನಮ್ಮನ್ನು ನಾವೇ ಪ್ರತ್ಯೇಕವಾಗಿರಿಸುವ (ಹೋಮ್ ಕ್ವಾರೆಂಟೈನ್) ವ್ಯವಸ್ಥೆಯೇ ಜನತಾ ಕರ್ಫ್ಯೂ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರ ತನಕ ಜನರು ಮನೆಯಿಂದ ಹೊರಗೆ ಹೋಗಬಾರದು. ಮಾರ್ನಿಂಗ್ ವಾಕ್ ಅಥವಾ ಇನ್ಯಾವುದೇ ಕೆಲಸ ಕಾರ್ಯಗಳಿಗಾಗಿ (ಅಗತ್ಯ ಪ್ರಯಾಣಗಳನ್ನು ಹೊರತುಪಡಿಸಿ) ಹೊರಗೆ ಹೋಗುವುದನ್ನು ನಿಲ್ಲಿಸಿ.

2. ಇದು ಕಾನೂನು ಜಾರಿ ಮಾಡಿದ ಕರ್ಫ್ಯೂ ಅಲ್ಲ. ಜನ ಹಿತಕ್ಕಾಗಿಸ್ವಇಚ್ಛೆಯಿಂದ ಪಾಲ್ಗೊಳ್ಳಬೇಕು. ದೇಶದ ಹಲವಾರು ರಾಜ್ಯಗಳು ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದು, ಅಂಗಡಿಗಳನ್ನು ಮುಚ್ಚಲು ಆದೇಶಿಸಿವೆ.

3.ತುರ್ತು ಸೇವೆಗಳಾದ ಅಗ್ನಿಶಾಮಕ, ಆ್ಯಂಬುಲೆನ್ಸ್ ಮತ್ತು ಆಸ್ಪತ್ರೆಗಳು ಎಂದಿನಂತೆ ಕಾರ್ಯವೆಸಗಲಿವೆ. ಅಗತ್ಯ ಬಂದರೆ ಮನೆಯಿಂದ ಹೊರಗೆ ಹೋಗುವ ಬದಲು ಸಹಾಯವಾಣಿ ಬಳಸಬಹುದು.

4. ವೈದ್ಯಕೀಯ ಸಿಬ್ಬಂದಿಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಬ್ಯುಸಿಯಾಗಿರುವುದರಿಂದ ಆಸ್ಪತ್ರೆಗಳಿಗೆ ಹೋಗಿ ಇತರ ಚಿಕಿತ್ಸೆ ಪಡೆಯುವುದನ್ನು ಆದಷ್ಟು ಕಡಿಮೆ ಮಾಡಿ. ಜನತಾ ಕರ್ಫ್ಯೂ ವೇಳೆ ಅನಾರೋಗ್ಯಕ್ಕೊಳಗಾದರೆ ಖಂಡಿತಾ ವೈದಕೀಯ ಸಹಾಯ ಪಡೆಯಬಹುದು.ಕುಟುಂಬ ವೈದ್ಯರ ಸಲಹೆ ಅಥವಾ ಸಹಾಯವಾಣಿ ಮೂಲಕ ಸಹಾಯವನ್ನು ಜನರು ಪಡೆಯಬಹುದಾಗಿದೆ.

5. ಜನತಾ ಕರ್ಫ್ಯೂನಂದು ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಕೊರೊನಾ ಸೋಂಕು ಲಕ್ಷಣ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಸಹಾಯ ಪಡೆದುಕೊಳ್ಳಿ. ಕೇಂದ್ರ ಆರೋಗ್ಯ ಸಚಿವಾಲಯದ ಸಹಾಯವಾಣಿ ಸಂಖ್ಯೆ- 011-23978046 ಅಥವಾ 1075ಕ್ಕೆ ಕರೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT