ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಹರಡುವಿಕೆ ತಡೆಗೆ 5–ಟಿ ಕ್ರಿಯಾ ಯೋಜನೆ, ‘1 ಲಕ್ಷ ಜನರಿಗೆ ಪರೀಕ್ಷೆ’

Last Updated 7 ಏಪ್ರಿಲ್ 2020, 20:48 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಐದು ಅಂಶಗಳ ಕ್ರಿಯಾಯೋಜನೆ ಕೈಗೊಳ್ಳಲಾಗುತ್ತದೆ. ನಿಜಾಮುದ್ದೀನ್, ದಿಲ್‌ಶಾದ್ ಗಾರ್ಡನ್‌ ಸೇರಿದಂತೆ ಹಾಟ್‌ಸ್ಪಾಟ್‌ಗಳಲ್ಲಿ 1 ಲಕ್ಷ ಜನರಿಗೆ ಕೋವಿಡ್–19 ಪರೀಕ್ಷೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಘೋಷಿಸಿದ್ದಾರೆ.

‘ದೊಡ್ಡಮಟ್ಟದಲ್ಲಿ ಆರೋಗ್ಯ ಪರೀಕ್ಷೆ ನಡೆಸದೆ ಇದ್ದರೆ ಸೋಂಕು ಹರಡಬಹುದು. ದಕ್ಷಿಣ ಕೊರಿಯಾದಲ್ಲಿ ಹೀಗೆ ಪರೀಕ್ಷೆ ನಡೆಸಿದ್ದರಿಂದಲೇ ಸೋಂಕಿತರನ್ನು ಗುರುತಿಸಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.

ಐದು ಟಿ ಕ್ರಿಯಾಯೋಜನೆ: ‘ಐದು ಟಿ–ಟೆಸ್ಟಿಂಗ್ (ಪರೀಕ್ಷೆ), ಟ್ರೇಸಿಂಗ್ (ಗುರುತುಪತ್ತೆ), ಟ್ರೀಟ್‌ಮೆಂಟ್ (ಚಿಕಿತ್ಸೆ), ಟೀಂ ವರ್ಕ್ (ತಂಡವಾಗಿ ಕಾರ್ಯನಿರ್ವಹಣೆ), ಟ್ರ್ಯಾಕಿಂಗ್ ಆ್ಯಂಡ್ ಮಾನಿಟರಿಂಗ್ (ಚಲನವಲನದ ಜಾಡು ಹಿಡಿಯುವುದು ಮತ್ತು ನಿಗಾ ಇರಿಸುವುದು) ಇದು ನಮ್ಮ ಕ್ರಿಯಾಯೋಜನೆ. ಸೋಂಕು ಪ್ರಕರಣಗಳು ಹೆಚ್ಚಾದಲ್ಲಿ ಹಂತಹಂತವಾಗಿ ಖಾಸಗಿ ಆಸ್ಪತ್ರೆಗಳು ಹಾಗೂ ಹೋಟೆಲ್‌ಗಳ 12 ಸಾವಿರ ಕೊಠಡಿಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ’ ಎಂದು ವಿಡಿಯೊ ಮೂಲಕ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT