ಶನಿವಾರ, ಜೂನ್ 6, 2020
27 °C

ಅಮೆರಿಕದಿಂದ ಭಾರತಕ್ಕೆ ಆಗಮಿಸಿದ 73 ಜನರಲ್ಲಿ 21 ಮಂದಿ ಕೊರೊನಾ ಸೋಂಕಿತರು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಪಂಚಕುಲ (ಹರಿಯಾಣ): ಮೇ 19ರಂದು ಅಮೆರಿಕದಿಂದ ಭಾರತಕ್ಕೆ ಆಗಮಿಸಿರುವ 73 ಜನರಲ್ಲಿ 21 ಮಂದಿ ಕೊರೊನಾ ಸೋಂಕಿತರೆಂದು ದೃಢಪಟ್ಟಿದೆ. 

ಜಗತ್ತಿನಲ್ಲೇ ಅತಿಹೆಚ್ಚು ಕೊರೊನಾ ಸೋಂಕಿತರಿರುವ ಅಮೆರಿಕದಿಂದ ಮೇ 19ರಂದು ಹರಿಯಾಣದ ಪಂಚಕುಲಕ್ಕೆ 73 ಜನರು ವಿಮಾನದ ಮೂಲಕ ಆಗಮಿಸಿದ್ದರು. ಅವರನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಒಟ್ಟು 21 ಜನರು ಕೋವಿಡ್‌-19 ಸೋಂಕಿತರೆಂದು ಪಂಚಕುಲ ಮುಖ್ಯ ಆರೋಗ್ಯ ಅಧಿಕಾರಿ ಡಾ. ಜಸ್‌ಜೀತ್‌ ಕೌರ್‌ ಸ್ಪಷ್ಟಪಡಿಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಅವರು, 'ಮೇ 19ರಂದು ಅಮೆರಿಕದಿಂದ 73 ಜನರು ಪಂಚಕುಲಕ್ಕೆ ಆಗಮಿಸಿದ್ದರು. ಅವರಲ್ಲಿ 21 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತರು ಪಂಚಕುಲಕ್ಕೆ ಸೇರಿದವರಲ್ಲ. ಅವರೆಲ್ಲರೂ ಹರಿಯಾಣದ ಬೇರೆಬೇರೆ ಜಿಲ್ಲೆಗಳ ನಿವಾಸಿಗಳು.  ಇನ್ನೂ ಎರಡು ಪ್ರಕರಣಗಳು ವರದಿಗಳು ಬರಬೇಕಿದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Covid-19 World Update: ಹೊಸ ಕೇಂದ್ರಬಿಂದುವಾಗಿ ಮಾರ್ಪಟ್ಟ ಬ್ರೆಜಿಲ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು