ಗುರುವಾರ , ಜೂನ್ 4, 2020
27 °C

ಭಾರತದ ಜನರು ಒಟ್ಟಾಗಿ ಕೊರೊನಾ ವೈರಸ್‌ ವಿರುದ್ಧ ಹೋರಾಡಲಿದ್ದಾರೆ: ರಾಹುಲ್ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಯುದ್ಧವನ್ನು ಭಾರತದ ಜನರು ಒಟ್ಟಾಗಿ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

ಈ ಯುದ್ಧವು ಧರ್ಮ, ಜಾತಿ ಮತ್ತು ವರ್ಗಗಳ ನಡುವಿನ ಭಿನ್ನತೆಗಳನ್ನು ದೂರ ಮಾಡಿ ಜನರನ್ನು ಒಂದುಗೂಡಿಸಲು ಅವಕಾಶ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಮಾರಣಾಂತಿಕ ವೈರಸ್ ಅನ್ನು ಸೋಲಿಸುವುದು ಜನರ ಸಾಮೂಹಿಕ ಉದ್ದೇಶವಾಗಿದೆ. ಸಹಾನುಭೂತಿ, ಪರಾನುಭೂತಿ ಮತ್ತು ಸ್ವಯಂ ಸೇವೆ ಈ ಉದ್ದೇಶದ ಕೇಂದ್ರ ಕಲ್ಪನೆಯಾಗಿದೆ ಎಂದು ರಾಹುಲ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಈ ಏಕತೆಯ ಸಂದೇಶವನ್ನು ನೀಡುವುದರ ಮೂಲಕ ರಾಹುಲ್‌ ಗಾಂಧಿಯವರು ಅನ್ಯ ಧರ್ಮಗಳಿಗೆ ಸೇರಿದ ಇಬ್ಬರು ಮಕ್ಕಳು ಪರಸ್ಪರ ಒಂದಾಗಿ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು