ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಕ್ವಾರಂಟೈನ್‌ನಲ್ಲಿ ತಬ್ಲೀಗಿ ಜಮಾತ್‌ನ 25,000 ಸದಸ್ಯರು

Last Updated 6 ಏಪ್ರಿಲ್ 2020, 14:07 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ದಾಖಲಾಗಿರುವ 4,067 ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಪೈಕಿ ಕನಿಷ್ಠ 1,445 ಪ್ರಕರಣಗಳಿಗೆ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ತಬ್ಲೀಗಿ ಜಮಾತ್ ಧಾರ್ಮಿಕ ಸಭೆಗೆ ನಂಟಿದೆ. ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್‌ನಲ್ಲಿ ಸಭೆ ನಡೆಸಲಾಗಿತ್ತು. ಈಗ ತಬ್ಲೀಗಿ ಜಮಾನ್‌ ಕೊರೊನಾ ಸಾಂಕ್ರಾಮಿಕ ಕೇಂದ್ರವಾಗಿ ಪರಿಣಮಿಸಿದೆ.

ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯಲು ತಬ್ಲೀಗಿ ಜಮಾತ್‌ನ ಕಾರ್ಯಕರ್ತರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ್ದವರು ಸೇರಿ ಒಟ್ಟು 25,500 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಸೋಮವಾರ ಸರ್ಕಾರ ತಿಳಿಸಿದೆ.

ತಬ್ಲೀಗಿ ಜಮಾತ್‌ನ ಸ್ಥಳೀಯ ಕಾರ್ಯಕರ್ತರು, ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದವರು ಸೇರಿ ಒಟ್ಟು 25,500 ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ. ತಬ್ಲೀಗಿ ಜಮಾನ್‌ನ ಕೆಲವು ಜನರು ತಂಗಿದ್ದ ಹರಿಯಾಣದ ಐದು ಹಳ್ಳಿಗಳನ್ನು ನಿರ್ಬಂಧಿಸಲಾಗಿದೆ ಹಾಗೂ ಕ್ವಾರಂಟೈನ್‌ಗೆ ಒಳಪಡಿಸಿರುವುದಾಗಿ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯಾ ಸಲಿಲಾ ಶ್ರೀವಾಸ್ತವ ತಿಳಿಸಿದ್ದಾರೆ.

ಈವರೆಗೂ ತಬ್ಲೀಗಿ ಜಮಾತ್‌ನ 1,700ಕ್ಕೂ ಹೆಚ್ಚು ಸದಸ್ಯರನ್ನೂ ಬ್ಲ್ಯಾಕ್‌ಲಿಸ್ಟ್‌ ಮಾಡಲಾಗಿದೆ.

ತಬ್ಲೀಗಿ ಜಮಾತ್‌ನ 2,083 ವಿದೇಶಿ ಸದಸ್ಯರನ್ನು ಗುರುತಿಸಲಾಗಿದ್ದು, ಆ ಪೈಕಿ 1,750 ಸದಸ್ಯರನ್ನು ಬ್ಲ್ಯಾಕ್‌ಲಿಸ್ಟ್‌ ಮಾಡಲಾಗಿದೆ. ಲಾಕ್‌ಡೌನ್‌ ವಿಧಿಸುವ ಮೂಲಕ ಕೊರೊನಾ ಸೋಂಕು ವ್ಯಾಪಿಸುವುದನ್ನು ತಡೆಯಬಹುದಾಗಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

ಸರ್ಕಾರ ತಬ್ಲೀಗಿ ಜಮಾತ್‌ನ ನೂರಾರು ಜನರ ವೀಸಾ ರದ್ದು ಪಡಿಸಿದೆ. ವಿಸಾ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದರಿಂದ ಸರ್ಕಾರವು ಕಳೆದ ವಾರ ನೂರಾರು ತಬ್ಲೀಗಿ ಜಮಾತ್‌ ಸದಸ್ಯರ ವೀಸಾ ರದ್ದುಪಡಿಸಿದೆ. ಇದರೊಂದಿಗೆ ನಿಯಮ ಉಲ್ಲಂಘನೆಯಾಗಿರುವ ಎಲ್ಲರ ಮೇಲೂ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT