ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಜನ, ಅಂತರ, ಮಾಸ್ಕ್: ಇಷ್ಟಿದ್ದರೆ ಮದ್ವೆ ಆಗಲು ತೊಂದರೆ ಇಲ್ಲ

Last Updated 2 ಮೇ 2020, 13:11 IST
ಅಕ್ಷರ ಗಾತ್ರ

ನವದೆಹಲಿ: ಮದುವೆಯಾಗಲು ತೀರ್ಮಾನಿಸಿದ್ದವರು ಕೋವಿಡ್-19 ಪರಿಸ್ಥಿತಿಯಲ್ಲಿ ಲಾಕ್‌ಡೌನ್‌‌ನಿಂದಾಗಿ ಹತಾಶರಾಗಿದ್ದರೆ, ಮೇ 4ರಿಂದ ಲಾಕ್‌ಡೌನ್ ಸಮಯದಲ್ಲಿಯೇ ಸರ್ಕಾರವು ಮದುವೆ ಕಾರ್ಯಗಳನ್ನು ನಡೆಸಲು ಅನುಮತಿ ನೀಡಿದೆ. ಆದರೆ ಮದುವೆಗಾಗಿ 50ಕ್ಕಿಂತ ಹೆಚ್ಚಿನ ಜನರನ್ನು ಆಹ್ವಾನಿಸುವಂತಿಲ್ಲ.

ಲಾಕ್‌ಡೌನ್‌ನ ಹೊಸ ಮಾರ್ಗಸೂಚಿಗಳನ್ವಯ, ಮೇ 17ರವರೆಗೆ ವಿಸ್ತರಿಸಲ್ಪಟ್ಟಿರುವ ಲಾಕ್‌ಡೌನ್‌ ಹೊಸ ಮಾರ್ಗಸೂಚಿಗಳನ್ವಯ, ವಿವಾಹ ಕಾರ್ಯಕ್ರಮಗಳಿಗೆ ಅನುಮತಿ ನೀಡಿದ್ದಾರೆ. ಆದರೆ ಕುಟುಂಬಗಳು ಅಂತರವನ್ನು ಕಾಯ್ದುಕೊಳ್ಳುವುದನ್ನು ಪಾಲಿಸಲೇಬೇಕಿದೆ. 50ಕ್ಕಿಂತಲೂ ಹೆಚ್ಚಿನ ಅತಿಥಿಗಳನ್ನು ವಿವಾಹಕ್ಕೆ ಆಹ್ವಾನಿಸುವಂತಿಲ್ಲ ಎಂದು ಹೇಳಿದೆ.

ನೂತನ ಮಾರ್ಗಸೂಚಿಗಳನ್ವಯ ಅಂತ್ಯ ಸಂಸ್ಕಾರದಲ್ಲಿ ಕೇವಲ 20 ಜನರಷ್ಟೇ ಭಾಗವಹಿಸಲು ಅವಕಾಶ ನೀಡಿದೆ. ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿ ದೇಶಾದ್ಯಂತ ಮದುವೆ ಮತ್ತು ಅಂತ್ಯಕ್ರಿಯೆಗಳಿಗೆ ಅವಕಾಶವಿದೆ ಆದರೆ ಹೊಸ ಮಾರ್ಗಸೂಚಿಗಳ ಪ್ರಕಾರ ಪಾಲ್ಗೊಳ್ಳುವವರ ಸಂಖ್ಯೆಯನ್ನು ನಿಯಂತ್ರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್‌ಡೌನ್ ಹೇರಿಕೆಯಾದ ಮಾರ್ಚ್ 25 ರಿಂದ ಜನರು ಮದುವೆ ಮತ್ತು ಸಂಬಂಧಿತ ಕಾರ್ಯಗಳಿಗಾಗಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿತ್ತು. ನಿರ್ಬಂಧಗಳು ಜಾರಿಯಲ್ಲಿರುವಾಗ, ದೇಶದಲ್ಲಿ ಅತಿ ಕಡಿಮೆ ಸಂಖ್ಯೆಯ ವಿವಾಹಗಳು ನಡೆದವು. ಆದರೆ ಕೆಲವು ನಿದರ್ಶನಗಳಲ್ಲಿ, ಮದುವೆಯ ನಂತರ ಕೆಲವು ಜನರು ಪಾರ್ಟಿಗಳನ್ನು ನಡೆಸುವ ಮೂಲಕ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಪ್ರಯಾಣದ ಮೇಲಿನ ನಿರ್ಬಂಧದಿಂದಾಗಿ ಜನರು ವಧು ಮತ್ತು ವರರೊಂದಿಗೆ ಪ್ರಯಾಣಿಸಲು ಸಾಧ್ಯವಾಗದೆ ಆನ್‌ಲೈನ್ ವಿವಾಹಗಳನ್ನು ನಡೆಸುತ್ತಿದ್ದಾರೆ ಎಂಬ ವರದಿಗಳೂ ಕೂಡ ಬಂದವು.

ದೆಹಲಿಯಲ್ಲಿ ನಡೆದ ವಿವಾಹವೊಂದರಲ್ಲಿ ಇಬ್ಬರು ಪೊಲೀಸರು ಮಾತ್ರ ಅತಿಥಿಗಳಾಗಿದ್ದರು. ವಧು-ವರರ ಹೆತ್ತವರ ಕೋರಿಕೆ ಮೇರೆಗೆ ದಂಪತಿಗಳನ್ನು ವಿವಾಹ ನೋಂದಣಿ ಕಚೇರಿಗೆ ಕರೆದೊಯ್ಯಲಾಯಿತು. ಲಾಕ್‌ಡೌನ್ ಸಮಯದಲ್ಲೇ ನಟ ಚೆಂಬನ್ ವಿನೋದ್ ಅವರ ವಿವಾಹವು ಕೇರಳದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT