ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ 'ಆಪ್':  ಮತ ಎಣಿಕೆ ಮುಗಿದ ನಂತರ ಮುಂದೇನು?

Last Updated 11 ಫೆಬ್ರುವರಿ 2020, 14:42 IST
ಅಕ್ಷರ ಗಾತ್ರ

ದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ ಸಾಧಿಸಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಇತ್ತ ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಗೆಲುವಿನ ಓಟ ಮುಂದುವರಿದ್ದಿದ್ದು ಅರವಿಂದ ಕೇಜ್ರಿವಾಲ್ ಮೂರನೇ ಬಾರಿ ಮುಖ್ಯಮಂತ್ರಿ ಗದ್ದುಗೆಗೇರಲು ಸಿದ್ಧತೆ ನಡೆಸಿದ್ದಾರೆ. ಮುಂದೇನಾಗಲಿದೆ? ಚುನಾವಣೆಯಲ್ಲಿ ಗೆದ್ದ ಸಂಭ್ರಮ ಮುಗಿದ ಮೇಲೆ ಮುಂದಿನ ಕೆಲಸವೇನು?

ಮೊದಲ ಕೆಲಸ ಅಂದರೆ ಅಭಿನಂದನೆ ಸಲ್ಲಿಸುವುದು. ಬಿಜೆಪಿ ನಾಯಕರು ತಮ್ಮ ಸೋಲನ್ನು ಒಪ್ಪಿಕೊಳ್ಳಬಹುದು ಮತ್ತು ಗೆಲುವು ಸಾಧಿಸಿದ ಪಕ್ಷವನ್ನು ಅಭಿನಂದಿಸಬಹುದು. ಆಮ್ ಆದ್ಮಿ ಪಕ್ಷ ದೆಹಲಿಯ ಜನರಿಗೆ ಧನ್ಯವಾದಗಳನ್ನು ಹೇಳಬಹುದು ಮತ್ತು ಮುಂದಿನ ಐದು ವರ್ಷ ಇನ್ನ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದು ಪ್ರಾಮಾಣಿಕ ಭರವಸೆ ನೀಡಬಹುದು.

ಇದಾದ ನಂತರ ಕೇಜ್ರಿವಾಲ್ ನೇತೃತ್ವದಲ್ಲಿ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುತ್ತದೆ. ದೇಶದ ವಿವಿಧ ಭಾಗಗಳಿಂದ ರಾಜಕೀಯ ನಾಯಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಕಳುಹಿಸಬಹುದು. ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನವೇ ಅರವಿಂದ ಕೇಜ್ರಿವಾಲ್ ಮಮತಾ ಬ್ಯಾನರ್ಜಿಗೆ ಕರೆ ಮಾಡಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುತಂತೆ ಆಹ್ವಾನಿಸಿದ್ದರು.

ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಬಹುದು ಇಲ್ಲವೇ ಆಮ್ ಆದ್ಮಿಯ ನೀತಿಗೆ ತಕ್ಕಂತೆ ಸಾಧಾರಣ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬಹುದು.

ಸರ್ಕಾರ ರಚಿಸಿ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುವುದು. ಬಿಜೆಪಿ ದೆಹಲಿ ವಿದಾನಸಭೆಯಲ್ಲಿ ವಿರೋದ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲಿದೆ.ಬಹುಮತ ಪಡೆದುಅಧಿಕಾರಕ್ಕೇರಿರುವ ಆಮ್ ಆದ್ಮಿ ಪಕ್ಷ ಮುಂದಿನ ಐದು ವರ್ಷ ಆಡಳಿತ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT