ಮಂಗಳವಾರ, ಸೆಪ್ಟೆಂಬರ್ 21, 2021
25 °C

ನೋಟು ರದ್ದತಿಯಿಂದಾಗಿ ಕಪ್ಪು ಹಣದ ಮೇಲೆ ಕಡಿವಾಣ ಬಿದ್ದಿಲ್ಲ: ಒ.ಪಿ. ರಾವತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನೋಟು ರದ್ಧತಿ ಕಪ್ಪು ಹಣದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್ ಹೇಳಿದ್ದಾರೆ. ಶನಿವಾರ  ಹುದ್ದೆಯಿಂದ ನಿವೃತ್ತಿ ಹೊಂದಿರುವ ರಾವತ್ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನಾಡಿದ್ದಾರೆ.

ನೋಟು ರದ್ದತಿ ನಂತರ ನಡೆದ ಚುನಾವಣೆಯ ವೇಳೆ ಅತೀ ಹೆಚ್ಚು ಕಪ್ಪುಹಣವನ್ನು ನಾವು ವಶಪಡಿಸಿಕೊಂಡಿದ್ದೆವು. ಹಾಗಾಗಿ ನೋಟು ರದ್ದತಿಯಿಂದಾಗಿ ಕಪ್ಪು ಹಣದ ನಿಯಂತ್ರಣ ಸಾಧ್ಯವಾಗಿಲ್ಲ ಎಂಬುದು ಇಲ್ಲಿ  ಸ್ಪಷ್ಟವಾಗಿದೆ. ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ವೇಳೆ ಕಪ್ಪು ಹಣವನ್ನು ಚುನಾವಣಾ ಆಯೋಗ ವಶ ಪಡಿಸಿಕೊಂಡಿದೆ. ಇಲ್ಲಿಯವರೆಗೆ  ₹200 ಕೋಟಿಗಿಂತಲೂ ಹೆಚ್ಚು ಕಪ್ಪು ಹಣ ವಶಪಡಿಸಲಾಗಿದೆ ಎಂದು ರಾವತ್ ಹೇಳಿದ್ದಾರೆ.

ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರುವ ವೋಟಿಂಗ್ ಮಷೀನ್ ಗಳನ್ನು ಯಾವುದೇ ರೀತಿಯಲ್ಲಿ ಹ್ಯಾಕ್ ಮಾಡಲಾಗುವುದಿಲ್ಲ. ಶೇ.99ರಷ್ಟು ರಾಜಕೀಯ ಪಕ್ಷಗಳು ಇವಿಎಂನ್ನು ಬೆಂಬಲಿಸುತ್ತಿವೆ. ಇದನ್ನು ಪರಿಶೀಲಿಸಬೇಕು ಎಂದಾದರೆ ಯಾರಿಗೆ ಬೇಕಾದರೂ ಚುನಾವಣಾ ಆಯೋಗವನ್ನು ಸಮೀಪಿಸಬಹುದುಯಆಯೋಗ ಇದಕ್ಕಾಗಿ ಸೌಕರ್ಯ ಮಾಡಿಕೊಡುವುದು ಎಂದಿದ್ದಾರೆ ರಾವತ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು