ಬುಧವಾರ, ಜನವರಿ 29, 2020
27 °C

ಉಗ್ರರಿಗೆ ಆಶ್ರಯ: ಡಿವೈಎಸ್‌ಪಿ ದೇವಿಂದರ್ ಸಿಂಗ್ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ : ಮೂವರು ಉಗ್ರರಿಗೆ ಆಶ್ರಯ ಒದಗಿಸಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿ ದೇವಿಂದರ್‌ ಸಿಂಗ್‌ ಅವರನ್ನು ಸೋಮವಾರ ಅಮಾನತು ಪಡಿಸಲಾಗಿದೆ.

ಸೇನೆಯ ಘಟಕದ ಮುಖ್ಯ ಕಚೇರಿ ಬಳಿಯ ತನ್ನ ಮನೆಯಲ್ಲೇ ಉಗ್ರರನ್ನು ಇರಿಸಿಕೊಂಡಿದ್ದುದು ತನಿಖೆಯಿಂದ ಗೊತ್ತಾಗಿದೆ. ಈ ಅಧಿಕಾರಿಗೆ ನಾಲ್ಕು ದಿನಗಳ ಹಿಂದಷ್ಟೇ ರಾಷ್ಟ್ರಪತಿಗಳ ಪದಕ ದೊರೆತಿತ್ತು.

ಪೊಲೀಸ್‌ ಮತ್ತು ಗುಪ್ತದಳದ ಅಧಿಕಾರಿಗಳು ಸತತವಾಗಿ ಅವರನ್ನು ತನಿಖೆಗೆ ಒಳಪಡಿಸಿದ್ದಾರೆ. ಅವರನ್ನು ಡಿವೈಎಸ್‌ಪಿ ಆಗಿ ನಿಯೋಜಿಸಿದ್ದ ಶ್ರೀನಗರ ವಿಮಾನನಿಲ್ದಾಣ ಬಳಿಯ ಕಚೇರಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

 

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು