ಮಂಗಳವಾರ, ಜನವರಿ 21, 2020
19 °C

ದೆಹಲಿ ಸೇರಿ ಉತ್ತರ ಭಾರತದ ಹಲವು ಕಡೆ ಭೂಕಂಪ, ಅಫ್ಗಾನಿಸ್ತಾನದಲ್ಲಿ 6.3 ತೀವ್ರತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದೆಹಲಿಯಲ್ಲಿ ಭೂಕಂಪ

ನವದೆಹಲಿ: ದೆಹಲಿ–ಎನ್‌ಸಿಆರ್‌ ವಲಯ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಶುಕ್ರವಾರ ಸಂಜೆ ಭೂಕಂಪನ ಸಂಭವಿಸಿದೆ. 

ಅಫ್ಗಾನಿಸ್ತಾನದ ಹಿಂದುಕುಷ್ ಪ್ರದೇಶದಲ್ಲಿ 6.3 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಅದರ ಪ್ರಭಾವ ರಾಷ್ಟ್ರರಾಜಧಾನಿ ಮತ್ತು ಸುತ್ತಲಿನ ಪ್ರದೇಶದಲ್ಲೂ ಆಗಿದೆ. ಸುಮಾರು ಒಂದು ನಿಮಿಷದ ವರೆಗೂ ಕಂಪನದ ಅನುಭವವಾಗಿದೆ.

ದೆಹಲಿಯಲ್ಲಿ ಭೂಕಂಪನದ ಅನುಭವ ಆಗುತ್ತಿದ್ದಂತೆ ಜನರು ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿದ್ದಾರೆ. ಗುರುಗ್ರಾಮ, ನೋಯ್ಡಾ ಹಾಗೂ ಜೈಪುರದಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದಾಗಿ ಸಂಭವಿಸಿರುವ ಹಾನಿಯ ಬಗ್ಗೆ ಈವರೆಗೂ ತಿಳಿದು ಬಂದಿಲ್ಲ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು