ನವಜೋತ್ ಸಿಂಗ್ ಸಿಧುಗೆ ಚುನಾವಣಾ ಆಯೋಗ ನೋಟಿಸ್

ಶುಕ್ರವಾರ, ಮೇ 24, 2019
30 °C

ನವಜೋತ್ ಸಿಂಗ್ ಸಿಧುಗೆ ಚುನಾವಣಾ ಆಯೋಗ ನೋಟಿಸ್

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಪರಾಭವಗೊಳಿಸಲು ಮುಸ್ಲಿಂ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಚುನಾವಣಾ ಪ್ರಚಾರದಲ್ಲಿ ಧರ್ಮ ಮತ್ತು ರಾಜಕೀಯವನ್ನು ಬೆರೆಸಬೇಡಿ ಎಂದು ಸುಪ್ರೀಂಕೋರ್ಟ್  ರಾಜಕಾರಣಿಗಳಿಗೆ ಹೇಳಿತ್ತು.

ಮುಸ್ಲಿಂ ಮತಗಳನ್ನು ಒಗ್ಗೂಡಿಸಬೇಕು ಎಂದು ಕರೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆಯ್ನು ಸಿಧು ಉಲ್ಲಂಘಿಸಿದ್ದಾರೆ. ನೋಟಿಸ್‍ಗೆ 24 ಗಂಟೆಗಳೊಳಗೆ ಪ್ರತಿಕ್ರಿಯಿಸದೇ ಇದ್ದರೆ ಸಿಧು ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು  ಚುನಾವಣಾ ಆಯೋಗ ಹೇಳಿದೆ. ಬಿಹಾರದ ಕತಿಹಾರ್‍‌ನಲ್ಲಿ ನಡೆಸಿದ ಭಾಷಣದ ವಿರುದ್ಧವೂ ಸಿಧು ವಿರುದ್ಧ ಎಫ್‍ಐಆರ್ ದಾಖಲಾಗಿದೆ.
 

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !