ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕುರಿತ ವೆಬ್‌ ಸೀರಿಸನ್ನು ಈ ಕೂಡಲೇ ನಿಲ್ಲಿಸಿ: ಚುನಾವಣೆ ಆಯೋಗ 

Last Updated 20 ಏಪ್ರಿಲ್ 2019, 11:17 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತ ಆನ್‌ಲೈನ್‌ ಸೀರಿಸ್‌ ‘ ಮೋದಿ: ಜರ್ನಿ ಆಫ್‌ ಎ ಕಾಮನ್‌ ಮ್ಯಾನ್‌’ಅನ್ನು ಈ ಕೂಡಲೇ ನಿಲ್ಲಿಸುವುಂತೆ ಚುನಾವಣೆ ಆಯೋಗವು‘ಎರೋಸ್‌ ನೌ‘ ಎಂಬ ಡಿಜಿಟಲ್‌ ಮಾಧ್ಯಮಕ್ಕೆ ಸೂಚನೆ ನೀಡಿದೆ.

ಮೋದಿ ಅವರ ಜೀವನ ಚರಿತ್ರೆ ಕುರಿತ ಚಿತ್ರವನ್ನು ಚುನಾವಣೆ ಮುಗಿಯವರೆಗೆ ಪ್ರದರ್ಶನ ಮಾಡುವಂತಿಲ್ಲ ಎಂಬ ಏ.10ರ ತನ್ನ ಆದೇಶವನ್ನೇ ಉಲ್ಲೇಖಿಸಿ ‘ಎರೋಸ್‌ ನೌ’ ಡಿಜಿಟಲ್‌ ಮಾಧ್ಯಮಕ್ಕೆ ಇಂದು ಚುನಾವಣೆ ಆಯೋಗಸೂಚನೆ ನೀಡಿದೆ. ನಿಮ್ಮ ಡಿಜಿಟಲ್‌ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ‘ಮೋದಿ: ಜರ್ನಿ ಆಫ್‌ ಎ ಕಾಮನ್‌ ಮ್ಯಾನ್‌’ ಎಂಬ ಆನ್‌ಲೈನ್‌ ಸೀರಿಸ್‌ ಅನ್ನು ನಿಲ್ಲಿಸಬೇಕು. ಇದರ 5 ಸಂಚಿಕೆ ನಿಮ್ಮ ಡಿಜಿಟಲ್‌ ವೇದಿಕೆಯಲ್ಲಿ ಲಭ್ಯವಿದೆ. ಅವುಗಳನ್ನೆಲ್ಲ ತೆಗೆದು ಹಾಕಬೇಕು,’ಎಂದು ಆಯೋಗ ಹೇಳಿದೆ.

‘ಈ ವೆಬ್‌ ಸೀರಿಸ್‌ ಸದ್ಯ ದೇಶದ ಪ್ರಧಾನಿಯಾಗಿರುವ, ಪಕ್ಷವೊಂದರ ನಾಯಕರಾಗಿರುವ, ಚುನಾವಣೆಯಲ್ಲಿ ಸ್ವತಃ ಅಭ್ಯರ್ಥಿಯೂ ಆಗಿರುವ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ್ದಾಗಿದೆ ಎಂಬುದು ದಾಖಲೆಗಳನ್ನು ಪರಿಶೀಲಿಸಿದ ನಂತರ ಗೊತ್ತಾಗಿದಿದೆ. ಹೀಗಾಗಿ ಸೀರಸ್‌ನ ಪ್ರದರ್ಶನವನ್ನು ನಿಲ್ಲಿಸಬೇಕು,’ ಎಂದೂ ಚುನಾವಣೆ ಆಯೋಗದ ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT