ಶುಕ್ರವಾರ, ಮಾರ್ಚ್ 31, 2023
22 °C
ಮುಟ್ಟಿನ ನೈರ್ಮಲ್ಯ ದಿನದಲ್ಲಿ ಸಚಿವೆ ಸ್ಮೃತಿ ಇರಾನಿ ಸಲಹೆ

‘ಮುಟ್ಟಿನ ಕುರಿತು ಹೆಣ್ಣು ಗಂಡು ಇಬ್ಬರಿಗೂ ತಿಳಿವಳಿಕೆ ನೀಡಿ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಮುಟ್ಟು ಅವಮಾನಕರವಾದ ವಿಷಯವಲ್ಲ ಎಂಬುದನ್ನು ಹುಡುಗಿಯರಿಗಷ್ಟೇ ಅಲ್ಲ ಹುಡುಗರಿಗೂ ಶಿಕ್ಷಣದ ಮೂಲಕ ತಿಳಿಸಿ ಹೇಳಬೇಕು’ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಗುರುವಾರ ಸಲಹೆ ನೀಡಿದ್ದಾರೆ. 

‘ಮುಟ್ಟಿನ ನೈರ್ಮಲ್ಯ ದಿನ’ದ ನಿಮಿತ್ತ ಟ್ವೀಟ್ ಮಾಡಿರುವ ಸ್ಮೃತಿ, ‘ಜನೌಷಧಿ ಕೇಂದ್ರಗಳಲ್ಲಿ ಕೈಗೆಟುಕುವ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ವಿತರಿಸಲಾಗುತ್ತಿದ್ದು, ಈ ಮೂಲಕ ಲಕ್ಷಾಂತರ ಭಾರತೀಯ ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯದ ಕುರಿತು ಖಾತ್ರಿ ಪಡಿಸಲಾಗಿದೆ. ಮುಟ್ಟು ಅವಮಾನಕರ ವಿಷಯವಲ್ಲ ಎಂಬುದನ್ನು ಹುಡುಗಿಯರಿಗಷ್ಟೇ ಅಲ್ಲ ಹುಡುಗರಿಗೂ ಶಿಕ್ಷಣ ನೀಡಲು ನಾವು ಬದ್ಧರಾಗೋಣ’ ಎಂದು ಹೇಳಿದ್ದಾರೆ.  

ಮುಟ್ಟಿನ ಕುರಿತು ಸರಣಿ ಟ್ವೀಟ್ ಮಾಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ‘ಮಹಿಳೆಯ ಜೈವಿಕ ಚಕ್ರವು ಆಕೆಯ ಅವಕಾಶಗಳ ಹಾದಿಯಲ್ಲಿ ಎಂದಿಗೂ ತಡೆಗೋಡೆಯಾಗಬಾರದು. ಪ್ರತಿ ಮಹಿಳೆಯೂ ಸುರಕ್ಷಿತ ಜೈವಿಕ ಚಕ್ರಕ್ಕೆ ಅರ್ಹಳು’ ಎಂದಿದ್ದಾರೆ. 

2014ರಿಂದ ಪ್ರತಿವರ್ಷ ಮೇ 28ರಂದು ಮುಟ್ಟಿನ ನೈರ್ಮಲ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು