ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ: ಸಲಹಾಸೂತ್ರ ಪ್ರಕಟಿಸಿದ ಆರೋಗ್ಯ ಸಚಿವಾಲಯ

Last Updated 17 ಮಾರ್ಚ್ 2020, 7:37 IST
ಅಕ್ಷರ ಗಾತ್ರ

ನವದೆಹಲಿ:ಕೋವಿಡ್-19 ಸೋಂಕು ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಸಲಹಾಸೂತ್ರವನ್ನು ಟ್ವೀಟಿಸಿದೆ. ಅಗತ್ಯವಿದ್ದರೆ ಮಾತ್ರ ಮಾಸ್ಕ್ ಧರಿಸಿ, ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.

ಯಾರು ಮಾಸ್ಕ್ ಧರಿಸಬೇಕು?
* ಸೋಂಕು ಲಕ್ಷಣಗಳಿದ್ದರೆ (ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ)
*ಕೋವಿಡ್-19 ರೋಗಿಯ ಪರಿಚಾರಕರಾಗಿದ್ದರೆ
* ಶ್ವಾಸಕೋಶದ ತೊಂದರೆ ಇರುವ ರೋಗಿಗೆ ಶುಶ್ರೂಷೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರಾಗಿದ್ದರೆ

ಮಾಸ್ಕ್ ಬಳಸುವವರು ಏನು ಮಾಡಬೇಕು?
* ಮಾಸ್ಕ್ ಧರಿಸುವಾಗ ಅದರ ನೆರಿಗೆಯನ್ನು ಬಿಡಿಸಿ, ಅವು ಕೆಳಮುಖವಾಗಿರುವಂಚೆ ನೋಡಿಕೊಳ್ಳಿ
* 6 ಗಂಟೆಗೊಮ್ಮೆ ಅಥವಾ ಅವು ಒದ್ದೆಯಾದಾಗ ಬದಲಿಸಿ
* ನಿಮ್ಮ ಮೂಗು, ಬಾಯಿ, ಗಲ್ಲ ಸರಿಯಾಗಿ ಮುಚ್ಚುವಂತೆ ಮಾಸ್ಕ್ ಧರಿಸಿ.
* ಬಳಸಿ ಬಿಸಾಡುವ ಮಾಸ್ಕ್‌ನ ಪುನರ್‌ಬಳಕೆ ಮಾಡಬೇಡಿ. ಬಳಸಿದ ಮಾಸ್ಕ್‌ಗಳನ್ನು ವೈರಾಣು ಮುಕ್ತ ಮಾಡಿ ಮುಚ್ಚಳವಿರುವ ಕಸದ ಬುಟ್ಟಿಗೆ ಹಾಕಿ
* ಮಾಸ್ಕ್ ಬಳಸುವಾಗ ಅದನ್ನು ಮುಟ್ಟದಿರಿ
* ಮಾಸ್ಕ್ ತೆಗೆಯುವಾಗ ಅದರ ಹೊರಭಾಗವನ್ನು ಮುಟ್ಟಬೇಡಿ
* ಮಾಸ್ಕ್‌ನ್ನು ಕುತ್ತಿಗೆಯಲ್ಲಿ ನೇತಾಡಲು ಬಿಡಬೇಡಿ
* ಮಾಸ್ಕ್ ಬಿಚ್ಚಿದ ನಂತರ ಸೋಪ್ ಹಾಕಿ ಕೈ ತೊಳೆದುಕೊಳ್ಳಿ ಇಲ್ಲವೇ ಮದ್ಯದ ಅಂಶವಿರುವ ಸ್ಯಾನಿಟೈಸರ್ ಬಳಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT