ದೇಶದಲ್ಲಿ ಬಿಜೆಪಿ ಪ್ರಭಾವ ಕಡಿಮೆಯಾಗಿದೆ: ರಜನಿಕಾಂತ್

7
ಇದು ಜನರ ವಿಜಯ ಅಂತ ಟ್ವಿಟ್ ಮಾಡಿದ್ದಾರೆ ಕಮಲ್ ಹಾಸನ್

ದೇಶದಲ್ಲಿ ಬಿಜೆಪಿ ಪ್ರಭಾವ ಕಡಿಮೆಯಾಗಿದೆ: ರಜನಿಕಾಂತ್

Published:
Updated:

ಚೆನ್ನೈ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಭವಿಷ್ಯ ಏನಾಗಬಹುದು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಬಿಜೆಪಿಗೆ ಎಂದೂ ಬಾಗಿಲು ತೆರೆಯದ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ಸ್ವಾಗತಿಸಿವೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜಕೀಯ ಸೇರ್ಪಡೆ ಕುರಿತು ಮಾತನಾಡಿದ್ದ ನಟ ರಜನಿಕಾಂತ್ ಪ್ರಸ್ತುತ ಸ್ವಂತ ರಾಜಕೀಯ ಪಕ್ಷ ಆರಂಭಿಸುವ ಚಿಂತನೆಯಲ್ಲಿದ್ದಾರೆ. ಬಿಜೆಪಿ ಸೋಲಿನ ಕುರಿತು ಪ್ರಸ್ತಾಪಿಸಿರುವ ಅವರು, ‘ಈ ಫಲಿತಾಂಶ ದೇಶದಲ್ಲಿ ಬಿಜೆಪಿ ಪ್ರಭಾವ ಕಡಿಮೆಯಾಗುತ್ತಿರುವುದನ್ನು ಬಿಂಬಿಸುತ್ತದೆ‘ ಎಂದು ಹೇಳಿದರು.

ಚೆನ್ನೈನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಜನಿಕಾಂತ್ ‘ಈ ಫಲಿತಾಂಶ ಗಮನಿಸಿದಾಗ ಬಿಜೆಪಿಗೆ ಜನಬೆಂಬಲ ಕಡಿಮೆಯಾಗಿದೆ ಎನಿಸುತ್ತದೆ’ ಎಂದರು. ‘ಸ್ವತಃ ಪ್ರಧಾನಿಯೇ ಪ್ರಚಾರ ನಡೆಸಿದರೂ ಬಿಜೆಪಿ ಸೋತಿದೆಯಲ್ಲವೇ?’ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಜನಿ, ‘ಇದು ಬಿಜೆಪಿಗೆ ಹಿನ್ನಡೆ ಎನ್ನುವುದು ನಿಜ. ಅದರಲ್ಲಿ ಯಾವುದೇ ಸಂದೇಹವಿಲ್ಲ‘ ಎಂದರು.

ಬಿಜೆಪಿ ಪರ ಒಲವು ತಮಗೆ ಒಲವು ಇದೆ ಎಂದು ರಜನಿಕಾಂತ್‌ ಈ ಹಿಂದೆ ಸೂಚಿಸಿದ್ದರು. ’ವಿರೋಧಪಕ್ಷಗಳಿಗೆ ಹೋಲಿಸಿದರೆ ಮೋದಿ ಹೆಚ್ಚು ಪ್ರಭಾವಿ‘ ಎನ್ನುವ ಅವರ ಹೇಳಿಕೆಯನ್ನು ಅವರು ಬಿಜೆಪಿ ಪರವಾಗಿದ್ದಾರೆ ಎಂದೇ ‘ಒಬ್ಬ ವ್ಯಕ್ತಿಯ ವಿರುದ್ಧ 10 ಜನರು (ವಿರೋಧಪಕ್ಷಗಳ ಒಕ್ಕೂಟ) ನಿಲ್ಲುತ್ತಾರೆ ಎಂದರೆ ಯಾರು ಶಕ್ತಿಶಾಲಿ?‘ ಎಂದು ರಜನಿಕಾಂತ್‌ ನವೆಂಬರ್‌ನಲ್ಲಿ ಪ್ರಶ್ನಿಸಿದ್ದರು. ‘ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಬಲ ನಾಯಕ‘ ಎಂದು ಈಚೆಗಷ್ಟೇ ನೀಡಿದ್ದ ರಜನಿ ಹೇಳಿಕೆಯನ್ನು ಜನರು ಇದೀಗ ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದಾರೆ.

ತಮಿಳು ಚಿತ್ರರಂಗದ ಮತ್ತೊಬ್ಬ ಸೂಪರ್‌ಸ್ಟಾರ್ ಕಮಲ್ ಹಾಸನ್, ಬಿಜೆಪಿ ಸೋಲಿನ ಬಗ್ಗೆ ‘ಇದು ಜನರ ವಿಜಯದ ಆರಂಭ‘ ಎಂದು ಟ್ವಿಟ್ ಮಾಡಿದ್ದಾರೆ. ತಮ್ಮದೇ ಆದ ‘ಮಕ್ಕಳ ನೀದಿ ಮೈಯ್ಯಮ್‘ ಪಕ್ಷ ಕಟ್ಟಿಕೊಂಡಿರುವ ಅವರು ಕೇಂದ್ರ ಮತ್ತು ರಾಜ್ಯಗಳ ಬಗ್ಗೆ ಕಟುವಾಗಿ ಮಾತನಾಡುತ್ತಾರೆ.

(The first sign of the new beginning. This is the judgment of the people.)

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !