ಭಾನುವಾರ, ಮಾರ್ಚ್ 29, 2020
19 °C

ಅಪ್ಪನ ಮೇಲೆಯೇ ಲೈಂಗಿಕ ಕಿರುಕುಳ ಆರೋಪ ಹೊರಿಸಲು ಮಗಳಿಗೆ ಒತ್ತಾಯಿಸಿದ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರಂ: ತನ್ನ ಪತಿಯ ಮೇಲೆಯೇ ಲೈಂಗಿಕ ಕಿರುಕುಳ ಆರೋಪ ಮಾಡುವಂತೆ ಮಗಳನ್ನು ಒತ್ತಾಯಿಸಿದ್ದ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೇರಳ ನ್ಯಾಯಾಲಯವು ಆದೇಶಿಸಿದೆ.

ವೈಯಕ್ತಿಯ ದ್ವೇಷದ ಹಿನ್ನೆಲೆಯಲ್ಲಿ ಪತಿಯ ವಿರುದ್ಧ ತನ್ನದೇ ಅಪ್ರಾಪ್ತ ಮಗಳನ್ನು ಎತ್ತಿಕಟ್ಟಿದ್ದ ತಾಯಿಯು ಎರಡು ವರ್ಷಗಳ ಹಿಂದೆ ಪ್ರಕರಣ ದಾಖಲಿಸಿದ್ದರು. 

ಈ ಘಟನೆಯು ಕೇರಳದ ಪಥನಮ್‌ಥಿಟ್ಟ ಜಿಲ್ಲೆಯ ಪಂದಾಲಮ್‌ನಲ್ಲಿ ನಡೆದಿತ್ತು. ಪ್ರಕರಣ ದಾಖಲಿಸಿದ್ದ ಮಹಿಳೆ ಮತ್ತು ಅವರ ಪತಿ ಮೂರು ವರ್ಷಗಳಿಂದ ಪ್ರತ್ಯೇಕವಾಗಿ ಜೀವಿಸುತ್ತಿದ್ದರು. 10 ವರ್ಷದ ಒಬ್ಬ ಮಗಳು ಪತಿಯ ಜೊತೆ ವಾಸವಿದ್ದರೆ, ಇನ್ನೊಂದು ಮಗು ಮಹಿಳೆ ಜೊತೆ ವಾಸವಿತ್ತು. 

ಪತಿಯ ಜೊತೆ ವಾಸವಿದ್ದ 10 ವರ್ಷ ವಯಸ್ಸಿನ ಅಪ್ರಾಪ್ತ ಮಗಳನ್ನು ಒತ್ತಾಯಿಸಿದ್ದ ಮಹಿಳೆಯು ಎರಡು ವರ್ಷಗಳ ಹಿಂದೆ  ತನ್ನ ಪತಿಯ ವಿರುದ್ದವೇ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸುವಂತೆ ಹೇಳಿದ್ದಳು. 

ಆ ‍ಪ್ರಕಾರ, ಮಗಳು ತನ್ನದೇ ತಂದೆಯ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಳು. ಪೋಸ್ಕೊ ಕಾಯ್ದೆ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. 

ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯದ ಮುಂದೆ ಗುರುವಾರ ಹೇಳಿಕೆ ನೀಡಿದ್ದ ಮಗಳು ತಾನು ಮಾಡಿದ ಆರೋಪದ ಹಿಂದೆ ತನ್ನ ಅಮ್ಮನ ಬಲವಂತವಿತ್ತು. ತನ್ನ ಆರೋಪ ಸುಳ್ಳುನಿಂದ ಕೂಡಿದೆ ಎಂದು ತಿಳಿಸಿದ್ದಾಳೆ. 

ಮಗಳ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ನ್ಯಾಯಾಲಯವು ತಾಯಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು