ಸೋಮವಾರ, ಜೂನ್ 21, 2021
28 °C

ಕೃತಿಚೌರ್ಯ ಆರೋಪ: ಪ್ರಶಾಂತ್ ಕಿಶೋರ್ ವಿರುದ್ಧ ಎಫ್ಐಆರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ : ಚುನಾವಣಾ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ವಿರುದ್ಧ ಕೃತಿಚೌರ್ಯ ಮಾಡಿದ ಆರೋಪದ ಮೇರೆಗೆ ಎಫ್‌ಐಆರ್ ದಾಖಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

‘ಕಾಂಗ್ರೆಸ್‌ನ ದತ್ತಾಂಶ ವಿಶ್ಲೇಷಕ ಸಂಯೋಜಕ ಶಾಶ್ವತ್ ಗೌತಮ್ ಅವರ ಅಭಿವೃದ್ಧಿಪಡಿಸಿರುವ ವಿಷಯವನ್ನು ಕಿಶೋರ್ ತಮ್ಮ ಅಭಿಯಾನಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಪಾಟಲೀಪುತ್ರದ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ’ ಎಂದು ಠಾಣಾಧಿಕಾರಿ ಕಮಲೇಶ್ವರ ಪ್ರಸಾದ್ ಸಿಂಗ್ ಹೇಳಿದ್ದಾರೆ.

ಗೌತಮ್ ಪೊಲೀಸ್ ಠಾಣೆಗೆ ದೂರು ನೀಡಿ, ‘ನನ್ನ 'ಬಿಹಾರ್ ಕಿ ಬಾತ್' ಕಾರ್ಯಕ್ರಮವನ್ನು ಪ್ರಶಾಂತ್ ಯಥಾವತ್ತಾಗಿ ಕಾಪಿ ಮಾಡಿ 'ಬಾತ್ ಕಿ ಬಿಹಾರ್' ಎಂದು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ. ಗೌತಮ್ ತಮ್ಮ ಸ್ಮೇಹಿತ ಒಸಾಮ ಎಂಬುವರ ವಿರುದ್ಧವೂ ಆರೋಪ ಮಾಡಿದ್ದು, ದೂರು ದಾಖಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು