ಮುಂಬೈಯ ಬಿಪಿಸಿಎಲ್ ಘಟಕದಲ್ಲಿ ಸ್ಫೋಟ, 43 ಮಂದಿಗೆ ಗಾಯ

7

ಮುಂಬೈಯ ಬಿಪಿಸಿಎಲ್ ಘಟಕದಲ್ಲಿ ಸ್ಫೋಟ, 43 ಮಂದಿಗೆ ಗಾಯ

Published:
Updated:

ಮುಂಬೈ: ಇಲ್ಲಿನ ಚೆಂಬೂರ್ ಎಂಬಲ್ಲಿರುವ ಭಾರತ್ ಪೆಟ್ರೊಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಕರಣಾ ಘಟಕದಲ್ಲಿ ಸ್ಫೋಟ ಸಂಭವಿಸಿ, ಬೆಂಕಿ ಹತ್ತಿಕೊಂಡಿದೆ. ಈ ದುರ್ಘಟನೆಯಲ್ಲಿ 43 ಮಂದಿಗೆ ಗಾಯಗಳಾಗಿವೆ

ಚೆಂಬೂರ್‌ನ ಮಹಲ್ ಗಾಂವ್‍ನಲ್ಲಿರುವ ಸಂಸ್ಕರಣಾ ಘಟಕದಲ್ಲಿ ಬುಧವಾರ ಮಧ್ಯಾಹ್ನ  2.55ರ ವೇಳೆಗೆ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿತ್ತು.

ಬಿಪಿಸಿಎಲ್‍ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ 22 ಮಂದಿಯನ್ನು  ಮನೆಗೆ ಕಳುಹಿಸಲಾಗಿದೆ.ತೀವ್ರ ಗಾಯಗೊಂಡ 21 ಮಂದಿಯನ್ನು ಚೆಂಬೂರ್ ನಲ್ಲಿರು ಇನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ,  ಒಬ್ಬ ಕಾರ್ಮಿಕ ಐಸಿಯು ನಲ್ಲಿದ್ದಾರೆ ಎಂದು ಡಿಸಿಪಿ ಶಾದಿ ಉಮಾಪ್ ಹೇಳಿದ್ದಾರೆ.

ಇದೀಗ ಬೆಂಕಿ ಉರಿಯುತ್ತಿದ್ದರೂ, ನಿಯಂತ್ರಣಕ್ಕೆ  ತರಲಾಗಿದೆ ಎಂದು ಕಂಪನಿ ಹೇಳಿದೆ.  ಸಂಸ್ಕರಣಾ ಘಟಕದಲ್ಲಿದ್ದ 20 ಕಾರ್ಮಿಕರನ್ನು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ,
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !