ಬುಧವಾರ, ಏಪ್ರಿಲ್ 8, 2020
19 °C

ಭಾರತ ಕರಾವಳಿಗೆ ಅಕ್ರಮ ಪ್ರವೇಶ: ಐವರು ಶ್ರೀಲಂಕಾ ಪ್ರಜೆಗಳು ಕಾವಲು ಪಡೆ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮೇಶ್ವರ (ತಮಿಳುನಾಡು): ಭಾರತೀಯ ಸಮುದ್ರದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಐದು ಮಂದಿ ಶ್ರೀಲಂಕಾ ಪ್ರಜೆಗಳನ್ನು ನೌಕಾದಳದ ಹೆಲಿಕಾಪ್ಟರ್ ಪತ್ತೆ ಹಚ್ಚಿ ಇಲ್ಲಿನ ಕರಾವಳಿ ಕಾವಲು ಪಡೆ ವಶಕ್ಕೆ ನೀಡಿದೆ.

ಭಾರತೀಯ ನೌಕಾದಳದ ಕಣ್ಗಾವಲು ಹೆಲಿಕಾಪ್ಟರ್ ಸಮುದ್ರ ತೀರದಲ್ಲಿ ಹಾರಾಟ ನಡೆಸುತ್ತಿದ್ದಾಗ ಧನುಸ್ಕೋಟಿಯ ಸಮುದ್ರ ತೀರದ ಅರಿಚಲ್ ಮುನೈ ಎಂಬ ಪ್ರದೇಶದಲ್ಲಿ ಯಾಂತ್ರಿಕ ದೋಣಿಯೊಂದು ಸಂಚರಿಸುತ್ತಿರುವುದು ಪತ್ತೆಯಾಗಿದೆ.

ಕೂಡಲೆ ಸ್ಥಳಕ್ಕೆ ಧಾವಿಸಿದ ನೌಕಾದಳದ ಅಧಿಕಾರಿಗಳು ಅಪರಿಚಿತರನ್ನು ವಿಚಾರಿಸಿದಾಗ ಇವರೆಲ್ಲಾ ಶ್ರೀಲಂಕಾ ಪ್ರಜೆಗಳಾಗಿದ್ದು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿರುವುದು ಕಂಡು ಬಂತು. ಕೂಡಲೆ ಅವರನ್ನು ತಮಿಳುನಾಡಿನ ಕರಾವಳಿ ಕಾವಲು ಪಡೆಯ ವಶಕ್ಕೆ ನೀಡಿದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದು ಎಎನ್ ಐ ವರದಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು