ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್ ಏರ್‌ವೇಸ್ ಬಿಕ್ಕಟ್ಟು ಮತ್ತಷ್ಟು ಕಗ್ಗಂಟು? ಪ್ರಧಾನಿ ಕಚೇರಿಯಿಂದ ತುರ್ತು ಸಭೆ

ಎಲ್ಲ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು
Last Updated 12 ಏಪ್ರಿಲ್ 2019, 14:30 IST
ಅಕ್ಷರ ಗಾತ್ರ

ನವದೆಹಲಿ:ಹಣಕಾಸು ಮುಗ್ಗಟ್ಟಿನಿಂದ ತತ್ತರಿಸುತ್ತಿರುವಜೆಟ್ ಏರ್‌ವೇಸ್‌ ಬಿಕ್ಕಟ್ಟು ಪರಿಹರಿಸಲು ಪ್ರಧಾನಿ ಕಚೇರಿಯಿಂದಶುಕ್ರವಾರ ತುರ್ತು ಸಭೆ ಕರೆಯಲಾಗಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಪ್ರಧಾನ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳು ಸಭೆ ಕರೆದಿದ್ದು, ಪ್ರಧಾನಿಯ ಪ್ರಧಾನ ಕಾರ್ಯದರ್ಶಿ ಅವರ ನೇತೃತ್ವದಲ್ಲಿಸಭೆ ನಡೆಯಲಿದೆ.

ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು, ‘ಜೆಟ್ ಏರ್‌ವೇಸ್‌ನ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ, ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಕಡಿಮೆಗೊಳಿಸಿ’ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿಯವರಿಗೆ ನಿರ್ದೇಶಿಸಿಶುಕ್ರವಾರ ಬೆಳಿಗ್ಗೆ ಟ್ವೀಟ್‌ ಮಾಡಿದ್ದರು. ಇದಾದ ನಂತರ ಸಭೆ ಆಯೋಜಿಸಲಾಗಿದೆ.

ಸದ್ಯ ಜೆಟ್‌ ಏರ್‌ವೇಸ್‌ಸೋಮವಾರದವರೆಗೆ ತನ್ನ ಎಲ್ಲಾ ಅಂತರರಾಷ್ಟ್ರೀಯ ಮಾರ್ಗಗಳ ವಿಮಾನಗಳ ಹಾರಾಟವನ್ನು ರದ್ದು ಪಡಿಸಿದೆ. ಈಗ ಕೇವಲ9 ವಿಮಾನಗಳಷ್ಟೇ ಹಾರಾಟ ನಡೆಸುತ್ತಿವೆ. ಇದರೊಂದಿಗೆ ಹಾರಾಟ ನಿಲ್ಲಿಸಿರುವ ವಿಮಾನಗಳ ಸಂಖ್ಯೆ 114ಕ್ಕೇರಿದೆ.

ಗುರುವಾರ ಸಂಜೆವರೆಗೂ 14 ವಿಮಾನಗಳು ಹಾರಾಟ ನಡೆಸಿದ್ದವು. ಗುರುವಾರ ರಾತ್ರಿ ವೇಳೆಗೆ ಅಂತರರಾಷ್ಟ್ರೀಯ ಮಾರ್ಗಗಳ ವಿಮಾನಗಳಾದಬಿ777ಎಸ್‌,ಎ330 ಅನ್ನು ಸ್ಥಗಿತಗೊಳಿಸಲಾಗಿದೆ.

ನಾಗರಿಕ ವಿಮಾನಯಾನದ ನಿಯಮದ ಪ್ರಕಾರ ಒಂದು ವಿಮಾನಯಾನಸಂಸ್ಥೆ ಅಂತರರಾಷ್ಟ್ರೀಯ ಮಾರ್ಗದಲ್ಲಿ ಹಾರಾಟ ನಡೆಸುವ ಕನಿಷ್ಟ 20 ವಿಮಾನಗಳನ್ನು ಹೊಂದಿರಬೇಕು.

ಗೋಯಲ್‌ ಷೇರು ಅಡಮಾನ

ಸಂಸ್ಥೆಯ ಸ್ಥಾಪಕ ನರೇಶ್‌ ಗೋಯಲ್‌ ಅವರು, ಸಾಲ ಪಡೆಯಲು ಸಂಸ್ಥೆಯಲ್ಲಿನ ಶೇ 26ರಷ್ಟು ಷೇರುಗಳನ್ನು ಬ್ಯಾಂಕ್‌ನಲ್ಲಿ ಅಡಮಾನ ಇರಿಸಿದ್ದಾರೆ.

ಸಂಸ್ಥೆಯಲ್ಲಿನ ಪಾಲು ಬಂಡವಾಳ ಮಾರಾಟದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಉದ್ದೇಶಕ್ಕೆ ಪಡೆಯುವ ಸಾಲಕ್ಕೆ ಖಾತರಿಯಾಗಿ ತಮ್ಮ ಷೇರುಗಳನ್ನು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಅಡಮಾನ ಇರಿಸಲು ಗೋಯಲ್‌ ಮುಂದಾಗಿದ್ದಾರೆ.

ಶೇ 26.01ರಷ್ಟು ‍ಪಾಲು ಬಂಡವಾಳದ 2.95 ಕೋಟಿ ಷೇರುಗಳನ್ನು ಗೋಯಲ್‌ ಅವರು ಬ್ಯಾಂಕ್‌ನಲ್ಲಿ ಅಡಮಾನ ಇರಿಸಿದ್ದಾರೆ ಎಂದು ಸಂಸ್ಥೆಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಬ್ಯಾಂಕ್‌ಗಳು ಮುಂದಿಟ್ಟ ಸಾಲ ಮರು ಹೊಂದಾಣಿಕೆ ಸೂತ್ರದ ಅನ್ವಯ, ನರೇಶ್‌ ಗೋಯಲ್‌ ಮತ್ತು ಅವರ ಪತ್ನಿ ಅನಿತಾ ಗೋಯಲ್‌ ಅವರು ಮಾರ್ಚ್‌ 25ರಂದು ನಿರ್ದೇಶಕ ಮಂಡಳಿಯಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.ಸಂಸ್ಥೆ 1993ರಲ್ಲಿ ಪ್ರಾರಂಭವಾಗಿದ್ದು, ಆರಂಭದಲ್ಲಿ 600 ವಿಮಾನಗಳು ಹಾರಾಟ ನಡೆಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT