ಕಾಂಗ್ರೆಸ್‌ ಆಕ್ಷೇಪದ ನಡುವೆಯೂ ಸಿಬಿಐ ಮುಖ್ಯಸ್ಥರ ಹೆಸರು ಪ್ರಕಟಿಸುವ ಸಾಧ್ಯತೆ

7

ಕಾಂಗ್ರೆಸ್‌ ಆಕ್ಷೇಪದ ನಡುವೆಯೂ ಸಿಬಿಐ ಮುಖ್ಯಸ್ಥರ ಹೆಸರು ಪ್ರಕಟಿಸುವ ಸಾಧ್ಯತೆ

Published:
Updated:

ನವದೆಹಲಿ: ಕಾಂಗ್ರೆಸ್‌ ಆಕ್ಷೇಪದ ಹೊರತಾಗಿಯೂ ಕೇಂದ್ರ ಸರ್ಕಾರ ಶನಿವಾರ ಹೊಸ ಸಿಬಿಐ ಮುಖ್ಯಸ್ಥರ ಹೆಸರನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 

ಸಿಬಿಐಗೆ ನೂತನ ಮುಖ್ಯಸ್ಥರ ನೇಮಕ ಮಾಡುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಯ್ಕೆ ಸಮಿತಿ ‘ಸಭೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಮಿತಿಯ ಸದಸ್ಯರಾದ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. 

ಶುಕ್ರವಾರದ ಸಭೆಯಲ್ಲಿ ಸರ್ಕಾರದ ಪಟ್ಟಿಯಲ್ಲಿದ್ದ 30 ಹೆಸರುಗಳ ಪೈಕಿ ನಾಲ್ವರ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಈ ನಾಲ್ವರ ಹೆಸರುಗಳನ್ನು ಮಲ್ಲಿಕಾರ್ಜುನ ಖರ್ಗೆ ತಿರಸ್ಕರಿಸಿದ್ದರು ಎಂದು ತಿಳಿದು ಬಂದಿದೆ.

1982 ರಿಂದ 1985ರ ಬ್ಯಾಚ್‌ನ ಅಧಿಕಾರಿಗಳನ್ನು ಶ್ರೇಣಿ ಮತ್ತು ಹಿರಿತನದ ಆಧಾರದ ಮೇಲೆ ನೇಮಕ ಮಾಡುವ ಸಾಧ್ಯತೆಗಳಿವೆ.  ಜಾವೀದ್‌ ಅಹ್ಮದ್‌, ರಜನಿ ಕಾಂತ್‌ ಮಿಶ್ರಾ ಮತ್ತು ಎಸ್‌ ಎಸ್‌ ದೇಶವಾಲ್ ಅವರ ಹೆಸರುಗಳು ಪ್ರಸ್ತಾಪವಾಗಿದ್ದವು ಎನ್ನಲಾಗಿದೆ. 

ಮೋದಿ ನೇತೃತ್ವದ ಸಮಿತಿ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ಎರಡು ಸಲವು ವಿಫಲವಾಗಿತ್ತು. ಕಾಂಗ್ರೆಸ್‌ ವಿರೋಧದ ನಡುವೆಯೂ ಸರ್ಕಾರ ಹೊಸ ಸಿಬಿಐ ಮುಖ್ಯಸ್ಥರ ಹೆಸರನ್ನು ಪ್ರಕಟಿಸುವ ಸಾಧ್ಯತೆಗಳಿವೆ. 

ಇಂದು ಸಂಜೆ ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !