616 ಕೆ.ಜಿ ಬೆಳ್ಳಿ ಆಭರಣ ವಶ

ಜೈಪುರ: ಅಕ್ರಮವಾಗಿ 616.5 ಕೆ.ಜಿ ಬೆಳ್ಳಿಯ ಆಭರಣ ಸಾಗಿಸುತ್ತಿದ್ದ ಆರು ಜನರನ್ನು ರಾಜಸ್ಥಾನದ ರಾಜಾಸ್‌ಮಂಡ್ ಹಾಗೂ ಶಿರೋಹಿ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಗಿದೆ.
ನಾಥದ್ವಾರ–ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರು ತಡೆದು ಪರಿಶೀಲಿಸಿದ ಭಯೋತ್ಪಾದನಾ ನಿಗ್ರಹ ಪಡೆಯು 600 ಕೆ.ಜಿ ಬೆಳ್ಳಿ ಆಭರಣ ಹಾಗೂ ಐವರನ್ನು ವಶಕ್ಕೆ ಪಡೆದಿದೆ ಎಂದು ನಾಥದ್ವಾರ ಪೊಲೀಸ್ ಠಾಣೆ ಉಸ್ತುವಾರಿ ಜೀತೇಂದ್ರಕುಮಾರ್ ಅಂಚಾಲಿಯಾ ತಿಳಿಸಿದ್ದಾರೆ. ಶಿರೋಹಿಯಲ್ಲಿ ಬಸ್‌ನಲ್ಲಿ ಸಾಗಿಸುತ್ತಿದ್ದ 16.5 ಕೆ.ಜಿ ಬೆಳ್ಳಿ ಗಟ್ಟಿ ಹಾಗೂ ವ್ಯಕ್ತಿಯೊಬ್ಬನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.