ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

200 ಮಿ.ಲೀ. ಸ್ಯಾನಿಟೈಜರ್‌ಗೆ ಗರಿಷ್ಠ ಬೆಲೆ ₹100: ಜೂನ್‌ ವರೆಗೂ ಒಂದೇ ದರ ನಿಗದಿ

Last Updated 21 ಮಾರ್ಚ್ 2020, 12:04 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದಂತೆ ಹ್ಯಾಂಡ್‌ ಸ್ಯಾನಿಟೈಜರ್‌ ಬಳಕೆ ಸಹ ಹೆಚ್ಚಳಗೊಂಡಿದೆ. ಇದರಿಂದಾಗಿ ಸ್ಯಾನಿಟೈಜರ್‌ಗಳಿಗೆ ದೇಶದಾದ್ಯಂತ ಭಾರೀ ಬೇಡಿಕೆ ಉಂಟಾಗಿದ್ದು, ದುಪ್ಪಟ್ಟು ಬೆಲೆಗೆ ಅವುಗಳ ಮಾರಾಟ ನಡೆದಿದೆ. ಅದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸ್ಯಾನಿಟೈಜರ್‌ಗಳಿಗೆ ₹100 ಬೆಲೆ ನಿಗದಿ ಪಡಿಸಿದೆ.

200 ಮಿ.ಲೀ. ಸ್ಯಾನಿಟೈಜರ್‌ಗೆ ಗರಿಷ್ಠ ₹100 ಬೆಲೆ ನಿಗದಿ ಪಡಿಸಲಾಗಿದೆ. ಈ ವರ್ಷ ಜೂನ್‌ 30ರ ವರೆಗೂ ಸ್ಯಾನಿಟೈಜರ್‌ಗಳಿಗೆ ಇದೇ ಬೆಲೆ ಮುಂದುವರಿಯಲಿದೆ. ಇದರೊಂದಿಗೆ ಮುಖಗವಸುಗಳಿಗೂ (ಮಾಸ್ಕ್‌) ನಿರ್ದಿಷ್ಟ ಬೆಲೆ ನಿಗದಿ ಪಡಿಸಲಾಗಿದೆ.

ಎರಡು ಪದರಗಳ(ಸರ್ಜಿಕಲ್‌) ಮಾಸ್ಕ್‌ಗಳಿಗೆ ₹8 ಹಾಗೂ ಮೂರು ಪದರಗಳ (ಸರ್ಜಿಕಲ್‌) ಮಾಸ್ಕ್‌ಗಳಿಗೆ ₹10 ಬೆಲೆ ನಿಗದಿಯಾಗಿರುವುದಾಗಿ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

ಮುಖಗವಸು ಮತ್ತು ಸ್ಯಾನಿಟೈಜರ್‌ಗಳ ತಯಾರಿಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯನ್ನು ಪರಿಗಣಿಸಿಯೇ ಬೆಲೆ ನಿಗದಿ ಪಡಿಸಿರುವುದಾಗಿ ಪಾಸ್ವಾನ್‌ ಹೇಳಿದ್ದಾರೆ.

ಸ್ಯಾನಿಟೈಜರ್‌ ಮತ್ತು ಮಾಸ್ಕ್‌ಗಳನ್ನು ಸರ್ಕಾರ ಅಗತ್ಯ ವಸ್ತುಗಳು ಎಂದು ಈ ಹಿಂದೆಯೇ ಘೋಷಿಸಿದೆ. ಈ ಮೂಲಕ ಬೆಲೆ ಏರಿಕೆ ಮತ್ತು ಅಕ್ರಮವಾಗಿ ದಾಸ್ತಾನು ಮಾಡುವುದನ್ನು ತಡೆಯುವ ಪ್ರಯತ್ನ ಮಾಡಲಾಗಿದೆ. ಮಾರ್ಚ್‌ 19ರಂದು ಸರ್ಕಾರ ಸ್ಯಾನಿಟೈಜರ್‌ಗಳ ತಯಾರಿಕೆ ಬಳಸುವ ಆಲ್ಕೊಹಾಲ್‌ಗಳ ಮೇಲೆ ದರ ನಿಗದಿ ಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT