ಗುಜರಾತ್‌ ಶಾಲಾ ಮಕ್ಕಳು ಇನ್ನು ‘ಯೆಸ್ ಸರ್’ ಬದಲಿಗೆ ‘ಜೈ ಹಿಂದ್’ ಎನ್ನಬೇಕು!

7
ದೇಶಭಕ್ತಿ ಮೂಡಿಸಲು ಕ್ರಮ ಎಂದ ಸರ್ಕಾರ

ಗುಜರಾತ್‌ ಶಾಲಾ ಮಕ್ಕಳು ಇನ್ನು ‘ಯೆಸ್ ಸರ್’ ಬದಲಿಗೆ ‘ಜೈ ಹಿಂದ್’ ಎನ್ನಬೇಕು!

Published:
Updated:

ಅಹಮದಾಬಾದ್: ಗುಜರಾತ್‌ನ ಶಾಲಾ ಮಕ್ಕಳು ಇನ್ನು ಅಧ್ಯಾಪಕರು ಹಾಜರಿ ಕರೆಯುವಾಗ ‘ಯೆಸ್ ಸರ್’ ಅಥವಾ ‘ಪ್ರಸೆಂಟ್ ಸರ್’ ಅನ್ನುವ ಹಾಗಿಲ್ಲ. ಬದಲಿಗೆ ‘ಜೈ ಹಿಂದ್’ ಅಥವಾ ‘ಜೈ ಭಾರತ್’ ಎನ್ನಬೇಕು!

ಹೌದು, ಈ ಕುರಿತು ಗುಜರಾತ್‌ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿ ಅಧಿಕೃತ ಆದೇಶ ಹೊರಡಿಸಿದ್ದು, ನೂತನ ನಿಯಮ ಇಂದಿನಿಂದಲೇ (ಜನವರಿ 1) ಜಾರಿಗೆ ಬರಲಿದೆ. 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಎಳವೆಯಲ್ಲಿಯೇ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆದೇಶ ಹೊರಡಿಸುವ ಕುರಿತು ಸೋಮವಾರ ನಡೆದ ಪರಾಮರ್ಶೆ ಸಭೆಯಲ್ಲಿ ಶಿಕ್ಷಣ ಸಚಿವ ಭೂಪೇಂದ್ರಸಿನ್ಹ ಚುಡಸಮ ನಿರ್ಧಾರ ಕೈಗೊಂಡಿದ್ದಾರೆ. ‘ಇದರಲ್ಲಿ ತಪ್ಪೇನು? ನಾವಿದನ್ನು ನಿರ್ಧರಿಸಿದ್ದೇವೆ ಮತ್ತು ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಿದ್ದೇವೆ’ ಎಂದು ಸಭೆಯ ನಂತರ ಅವರು ಹೇಳಿದ್ದರು.

ಆದೇಶದ ಪ್ರತಿಯನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದ್ದು, ಇಂದಿನಿಂದಲೇ ಜಾರಿಗೊಳಿಸುವಂತೆ ಸೂಚಿಸಲಾಗಿದೆ. ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ಪಡೆಯಲು ಶಿಕ್ಷಣ ಸಚಿವರು ಸಂಪರ್ಕಕ್ಕೆ ದೊರೆತಿಲ್ಲ.

ಬರಹ ಇಷ್ಟವಾಯಿತೆ?

 • 12

  Happy
 • 3

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !