ಕಾರಿಗೆ ಸಗಣಿ ಸಾರಿಸಿ ಸುದ್ದಿಯಾದ ಗುಜರಾತ್‌ ಮಹಿಳೆ: ಫೋಟೊಗಳು ವೈರಲ್‌

ಮಂಗಳವಾರ, ಜೂನ್ 18, 2019
29 °C

ಕಾರಿಗೆ ಸಗಣಿ ಸಾರಿಸಿ ಸುದ್ದಿಯಾದ ಗುಜರಾತ್‌ ಮಹಿಳೆ: ಫೋಟೊಗಳು ವೈರಲ್‌

Published:
Updated:

ಅಹಮದಾಬಾದ್: ಕಾರಿನೊಳಗೆ ಧಗೆ ಹೆಚ್ಚಾದರೆ, ಕಾರು ಬಿಸಿಯಾದರೆ ನಾವು ನೀವೆಲ್ಲ ಏನು ಮಾಡುತ್ತೇವೆ? ಕಾರಿನೊಳಗೆ ಎ.ಸಿ ಹಾಕಿಕೊಳ್ಳುತ್ತೇವೆ, ಕಾರನ್ನು ನೆರಳಿಗೆ ನಿಲ್ಲಿಸುತ್ತೇವೆ. ಲಕ್ಷಾಂತರ ರೂಪಾಯಿಗಳ ಕಾರಿಗೆ ಸಗಣಿ ಬಳಿಯುತ್ತೇವೆಯೇ? ಆದರೆ, ಗುಜರಾತ್‌ನ ಅಹಮದಾಬಾದ್‌ನ ಮಹಿಳೆಯೊಬ್ಬರು ತಮ್ಮ ಕಾರನ್ನು ತಂಪಾಗಿಡಲು ಸಗಣಿ ಬಳಿದು ಸುದ್ದಿಯಾಗಿದ್ದಾರೆ. 

ಸೆಜಲ್‌ ಶಾ ಎಂಬುವವರು ತಮ್ಮ ಟೊಯೊಟಾ ಆಲ್ಟೀಸ್‌ ಕಾರಿನ ಮೇಲ್ಮೈಗೆ ಸಗಣಿ ಸಾರಿಸಿರುವ ಫೋಟೋಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅಷ್ಟೇ ಅಲ್ಲ, ಸಗಣಿಯಿಂದಲೇ ಅಲ್ಲಲ್ಲಿ ರಂಗೋಲಿ ಆಕೃತಿಗಳನ್ನು ಕಾರಿನ ಮೇಲೆ ಬಿಡಿಸಲಾಗಿದ್ದು, ಸದ್ಯ ಅಹಮದಾಬಾದ್‌ನ ರಸ್ತೆಗಳಲ್ಲಿ ಈ ಕಾರು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.  

ಸಗಣಿ ಬಳಿಯುವುದರಿಂದ ಕಾರಿನ ತಾಪಮಾನವನ್ನು ನಿಯಂತ್ರಣದಲ್ಲಿಡಬಹುದು ಎನ್ನುತ್ತಾರೆ ಸೆಜಲ್‌ ಶಾ. ಬೇಸಿಗೆಯಲ್ಲಿ ಕಾರು ತಂಪಾಗಿದ್ದರೆ, ಚಳಿಗಾಲದಲ್ಲಿ ಬೆಚ್ಚಗಿರುತ್ತದೆ ಎಂಬುದು ಶಾ ಅವರ ಪ್ರತಿಪಾದನೆ. ಅಷ್ಟೇ ಅಲ್ಲ, ಕಾರಿಗೆ ಆಗುವ ತರಚು ಗುರುತುಗಳ ಬಾಧೆಯೂ ತಪ್ಪುತ್ತದೆ ಎನ್ನುತ್ತಾರವರು.

‘ಜಾಗತಿಕ ತಾಪಮಾನದಂಥ ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು ಈ ಮಾದರಿಯ ಉಪಾಯಗಳು ಸಹಕಾರಿ. ಎ.ಸಿ ಹೊರಸೂಸುವ ಅಪಾಯಕಾರಿ ಅನಿಲಗಳನ್ನು ನಾವು ಈ ಮೂಲಕ ತಪ್ಪಿಸಬಹುದು. ಸಗಣಿ ಬಳಿದ ನಂತರ ನಾನು ನನ್ನ ಕಾರಿನ ಎ.ಸಿಯನ್ನು ಚಾಲೂ ಮಾಡಿಯೇ ಇಲ್ಲ,’ ಇನ್ನುತ್ತಾರೆ ಶಾ. 

ಗೋಡೆ, ನೆಲ, ಮನೆ ಮುಂಭಾಗ ಸಗಣಿ ಸಾರಿಸುವುದು ಭಾರತೀಯ ಗ್ರಾಮೀಣ ಪರಂಪರೆಗಳಲ್ಲೊಂದು. ಸಗಣಿ ಸಾರಿಸುವಿಕೆಯಿಂದ ಮನೆಯ ವಾತಾವರಣ ನಿಯಂತ್ರಣದಲ್ಲಿರುತ್ತದೆ ಎಂಬುದು ಗ್ರಾಮೀಣರು ಸದಾ ಕಾಲ ಹೇಳುವ ಮಾತು ಕೂಡ ಹೌದು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 42

  Happy
 • 8

  Amused
 • 2

  Sad
 • 2

  Frustrated
 • 6

  Angry

Comments:

0 comments

Write the first review for this !