‘ತನಿಖಾ ಸಮಿತಿ ವಿಸರ್ಜನೆ ಮಾಡಿದ್ದೇಕೆ?’: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

7

‘ತನಿಖಾ ಸಮಿತಿ ವಿಸರ್ಜನೆ ಮಾಡಿದ್ದೇಕೆ?’: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

Published:
Updated:

ಕೋಲ್ಕತ್ತ: ಶಾರದಾ ಚಿಟ್‌ಫಂಡ್ ಹಗರಣದ ತನಿಖೆಗೆ ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಶ್ಯಾಮಲ್ ಸೇನ್ ಆಯೋಗವನ್ನು ಕೆಲಸ ಪೂರ್ಣಗೊಳಿಸುವ ಮೊದಲೇ ವಿಸರ್ಜನೆ ಮಾಡಿದ್ದು ಏಕೆ ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಕೋಲ್ಕತ್ತ ಹೈಕೋರ್ಟ್ ಪ್ರಶ್ನಿಸಿದೆ. 

ಸಮಿತಿಯ ಅವಧಿಯನ್ನು ವಿಸ್ತರಿಸದಿರಲು ಇರುವ ಕಾರಣಗಳನ್ನು ತಿಳಿಸುವಂತೆ ಬಂಗಾಳ ಸರ್ಕಾರಕ್ಕೆ ಏಳು ದಿನಗಳ ಕಾಲಾವಕಾಶ ನೀಡಿದೆ. ಹೂಡಿಕೆದಾರರಿಗೆ ಹಣ ಮರುಪಾವತಿಸಿದ್ದರೆ, ಅಂತಹವರ ಪಟ್ಟಿ ನೀಡುವಂತೆಯೂ ಸೂಚಿಸಿದೆ.

ರೋಸ್ ವ್ಯಾಲಿ ಚಿಟ್‌ಫಂಡ್‌ ಹಗರಣದಲ್ಲಿ ಹೂಡಿಕೆದಾರರ ಹಣವನ್ನು ಮರುಪಾವತಿಸಲು ಇರುವ ದಾರಿಗಳನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 29

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !