ಬುಧವಾರ, ಜೂನ್ 3, 2020
27 °C

ಒಂದೆರಡು ಕೊರೊನಾ ಪ್ರಕರಣ ಪತ್ತೆಯಾದರೆ ಇಡೀ ಕಚೇರಿ ಮುಚ್ಚಬೇಕಿಲ್ಲ: ಕೇಂದ್ರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Coronavirus

ನವದೆಹಲಿ: ಒಂದು ಅಥವಾ ಎರಡು ಕೊರೊನಾ ಪ್ರಕರಣ ಕಂಡುಬಂದರೆ ಇಡೀ ಕಚೇರಿಯನ್ನು ಮುಚ್ಚಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಲಾಕ್‌ಡೌನ್ 4ನೇ ಹಂತಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗೆ ಸೋಂಕು ಕಂಡುಬಂದಲ್ಲಿ ಇಡೀ ಕಚೇರಿ ಕಟ್ಟಡವನ್ನು 48 ಗಂಟೆಗಳ ಕಾಲ ಮುಚ್ಚುವಂತೆ ಸೂಚಿಸಿದೆ.

ಒಂದು ಅಥವಾ ಎರಡು ಪ್ರಕರಣ ಮಾತ್ರ ಕಂಡುಬಂದರೆ ಆ ಪ್ರದೇಶ ಅಥವಾ ಸೋಂಕಿತರು 48 ಗಂಟೆ ಹಿಂದಿನಿಂದ ಓಡಾಡಿದ್ದ ಸ್ಥಳಗಳನ್ನು ಮಾತ್ರ ಸೋಂಕುನಿವಾರಕಗಳಿಂದ ಶುಚಿಗೊಳಿಸಿದರೆ ಸಾಕಾಗುತ್ತದೆ. ಇಡೀ ಕಚೇರಿ ಕಟ್ಟಡ ಮುಚ್ಚುವುದು ಹಾಗೂ ಕೆಲಸ ನಿಲ್ಲಿಸಬೇಕಿಲ್ಲ. ಸೊಂಕು ನಿವಾರಕಗಳಿಂದ ಶುಚಿಗೊಳಿಸಿದ ಬಳಿಕ ಎಂದಿನಂತೆ ಕೆಲಸ ಕಾರ್ಯಗಳನ್ನು ನಡೆಸಬಹುದು ಎಂದು ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: 

ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿದ್ದರೆ ಇಡೀ ಕಚೇರಿ ಕಟ್ಟಡವನ್ನು 48 ಗಂಟೆಗಳ ಕಾಲ ಸೀಲ್‌ಡೌನ್ ಮಾಡಬೇಕು. ಸೋಂಕುನಿವಾರಕಗಳಿಂದ ಶುಚಿಗೊಳಿಸಬೇಕು ಎಂದು ಸೂಚಿಸಲಾಗಿದೆ.

‘ಇಡೀ ಕಟ್ಟಡವು ಸಮರ್ಪಕವಾಗಿ ಸೋಂಕುಮುಕ್ತವಾಗುವ ವರೆಗೆ ಮತ್ತು ಮರಳಿ ಕೆಲಸ ಮಾಡಲು ಯೋಗ್ಯ ಎಂದು ಘೋಷಿಸುವ ವರೆಗೆ ಎಲ್ಲ ಸಿಬ್ಬಂದಿ ಮನೆಯಿಂದಲೇ ಕಲಸ ಮಾಡಬೇಕು’ ಎಂದು ನಿರ್ದೇಶಿಸಲಾಗಿದೆ.

ಯಾರಿಗೇ ಕೊರೊನಾ ಸೋಂಕಿನ ಲಕ್ಷಣಗಳು ಕಂಡಬಂದರೂ ಕಡ್ಡಾಯವಾಗಿ ಕೇಂದ್ರ ಅಥವಾ ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಹಾಗೆಯೇ 1075 ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು