ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ | ಬಿರುಗಾಳಿ ಮಳೆಗೆ 8 ಮಂದಿ ಸಾವು; ಮಧ್ಯ ಭಾರತದಲ್ಲಿ ಬಿಸಿಗಾಳಿಯ ಎಚ್ಚರಿಕೆ

ರಾಜ್ಯದ ಉತ್ತರ–ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆ ಸಾಧ್ಯತೆ
Last Updated 3 ಜೂನ್ 2019, 5:47 IST
ಅಕ್ಷರ ಗಾತ್ರ

ಭುವನೇಶ್ವರ, ನವದೆಹಲಿ:ಒಡಿಶಾದ ರಾಜ್ಯದ ಹಲವೆಡೆ ಭಾನುವಾರ ರಾತ್ರಿ ಬೀಸಿದ ತೀವ್ರ ಗಾಳಿಸಹಿತ ಮಳೆ ಹಾಗೂ ಸಿಡಿಲು ಬಡಿದು ಎಂಟು ಜನ ಮೃತಪಟ್ಟಿದ್ದಾರೆ. ಇತ್ತ ಮಧ್ಯ ಬಾರತದ ರಾಜ್ಯಗಳಲ್ಲಿ ತಾಪಮಾನ ಹೆಚ್ಚುತ್ತಿದ್ದು, ತೀವ್ರತರವಾದ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನೂ ನೀಡಿದೆ.

ಒಡಿಶಾದ ಕೊರಾಪುಟ್‌, ಕೆಂದೂಜಹರ್‌, ಜಜ್ಪುರ ಮತ್ತು ಗಂಜಾಂನಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಿನಾಂಕವಾರು ಮಳೆ ಬೀಳುವ ಹಾಗೂ ಬಿಸಿಗಾಳಿ ಬೀಸುವ ಸ್ಥಳಗಳನ್ನು ಹವಾಮಾನ ಇಲಾಖೆ ಗುರುತಿಸಿದೆ.
ದಿನಾಂಕವಾರು ಮಳೆ ಬೀಳುವ ಹಾಗೂ ಬಿಸಿಗಾಳಿ ಬೀಸುವ ಸ್ಥಳಗಳನ್ನು ಹವಾಮಾನ ಇಲಾಖೆ ಗುರುತಿಸಿದೆ.

ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ

ಇಂದು(ಸೋಮವಾರ) ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ, ಗುಡುಗು ಸಿಡಿಲು ಸಹಿತ ಮಳೆ ಬೀಳಿದೆ. ಮಂಗಳವಾರ (ಜೂನ್‌ 4) ಕರ್ನಾಟಕದ ಉತ್ತರ ಒಳನಾಡು ಹಾಗೂ ತೆಲಂಗಾಣದಲ್ಲಿ ಬಿರುಗಾಳಿ, ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ ಬೀಳಲಿದೆ. ಇದೇ ಪರಿಸ್ಥಿತಿ ಜೂನ್‌ 7ರ ವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಉತ್ತರಾಖಂಡದ ಅಲ್ಮೋರಾದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ಚೌಬಾಟಿಯ ನದಿಯಲ್ಲಿ ಮಣ್ಣು ಮಿಶ್ರಿತ ನೀರು ಹರಿದಿದೆ. ವಿಡಿಯೊವನ್ನು ಎಎನ್‌ಐ ಟ್ವಿಟ್‌ ಮಾಡಿದೆ.

ಹೆಚ್ಚಿದ ತಾಪಮಾನ; ಬಿಸಿ ಗಾಳಿ ಎಚ್ಚರಿಕೆ

ಮಧ್ಯ ಬಾರತದ ರಾಜ್ಯಗಳು ಹಾಗೂ ರಾಜಸ್ಥಾನದಲ್ಲಿ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದ್ದು, ರಾಜಸ್ಥಾನದಲ್ಲಿ ಭಾನುವಾರ 48.9 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

ವಾಯುವ್ಯ ಹಾಗೂ ಮಧ್ಯ ಬಾರತ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಸೋಮವಾರ ಮತ್ತು ಮಂಗಳವಾರ ಎರಡು ದಿನ ತೀವ್ರತರವಾದ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಗುಡುಗು, ಸಿಡಿಲು ಸಹಿತ ಮಳೆ ಬೀಳಬಹುದಾದ ಸ್ಥಳಗಳನ್ನು ಹವಾಮಾನ ಇಲಾಖೆ ಗುರುತಿಸಿದೆ.
ಗುಡುಗು, ಸಿಡಿಲು ಸಹಿತ ಮಳೆ ಬೀಳಬಹುದಾದ ಸ್ಥಳಗಳನ್ನು ಹವಾಮಾನ ಇಲಾಖೆ ಗುರುತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT