ಉದ್ಯೋಗ,ಮಹಿಳಾ ಸುರಕ್ಷತೆ, ರೈತರ ಹಿತಕ್ಕಾಗಿ ಎಚ್ಚರಿಕೆಯಿಂದ ಚುನಾಯಿಸಿ: ಪ್ರಿಯಾಂಕಾ

ಮಂಗಳವಾರ, ಮಾರ್ಚ್ 26, 2019
26 °C

ಉದ್ಯೋಗ,ಮಹಿಳಾ ಸುರಕ್ಷತೆ, ರೈತರ ಹಿತಕ್ಕಾಗಿ ಎಚ್ಚರಿಕೆಯಿಂದ ಚುನಾಯಿಸಿ: ಪ್ರಿಯಾಂಕಾ

Published:
Updated:

ಗಾಂಧಿನಗರ(ಗುಜರಾತ್‌): ಈ ದೇಶ ಪ್ರೀತಿ, ಸಾಮರಸ್ಯ ಮತ್ತು ಸಹೋದರತ್ವದ ಅಡಿಪಾಯಗಳ ಮೇಲೆ ನಿರ್ಮಾಣವಾಗಿದೆ. ಆದರೆ, ಪ್ರಸ್ತುತ ದೇಶದಲ್ಲಿ ಏನಾಗುತ್ತಿದೆ ಎಂಬುದು ತುಂಬಾ ದುಃಖದ ಸಂಗತಿ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

ಇಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ನ ಜನ ಸಂಕಲ್ಪ ರ‍್ಯಾಲಿಯಲ್ಲಿ ಅವರು ಮಾತನಾಡಿದರು.  

ಪ್ರಸ್ತುತ ಚುನಾವಣೆ ನಿಖರವಾಗಿ ಏನೆಂಬುದನ್ನು ನೀವು ಯೋಚಿಸಬೇಕು. ಈ ಚುನಾವಣೆಯಲ್ಲಿ ನೀವು ಏನನ್ನು ಆಯ್ಕೆ ಮಾಡಲಿದ್ದೀರಿ? ಎಂದು ಪ್ರಿಯಾಂಕಾ ಜನರನ್ನು ಪ್ರಶ್ನಿಸಿದರು.

ನಿಮ್ಮ ಭವಿಷ್ಯವನ್ನು ನೀವು ಆಯ್ಕೆ ಮಾಡಲಿದ್ದೀರಿ. ನಿಷ್ಪ್ರಯೋಜಕ ಸಮಸ್ಯೆಗಳನ್ನು ಬೆಳೆಸಬಾರದು. ಚರ್ಚಿಸಬೇಕಾದ ವಿಷಯಗಳು ನಿಮಗಾಗಿ ಅತ್ಯಂತ ಪ್ರಮುಖವಾದದ್ದು ಮತ್ತು ನೀವು ಹೇಗೆ ಮುಂದುವರಿಯಬಹುದು ಎಂಬುದನ್ನು ಒಳಗೊಂಡಿರಬೇಕು ಎಂದು ಕಿವಿಮಾತು ಹೇಳಿದರು.

ಯುವ ಜನ ಹೇಗೆ ಉದ್ಯೋಗ ಗಳಿಸುತ್ತಾರೆ? ಮಹಿಳೆಯರು ಹೇಗೆ, ಎಷ್ಟರಮಟ್ಟಿಗೆ ಸುರಕ್ಷಿತವಾಗಿರುತ್ತಾರೆ? ರೈತರಿಗೆ ಏನು ಮಾಡಲಾಗುವುದು ಎಂಬ ಅಂಶಗಳು ಚುನಾವಣೆಯ ಪ್ರಮುಖ ವಿಷಯಗಳು. ಆದ್ದರಿಂದ, ನೀವು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.

ನಮ್ಮ ಸಂಸ್ಥೆಗಳು ನಾಶವಾಗುತ್ತಿವೆ. ನೀವು ನೋಡುವೆಲ್ಲೆಡೆ ದ್ವೇಷ ಹರಡುತ್ತಿದೆ. ನೀವು ಮತ್ತು ನಾವು ರಾಷ್ಟ್ರವನ್ನು ರಕ್ಷಿಸಲು ಒಟ್ಟಿಗೆ ಕಾರ್ಯೋನ್ಮುಖರಾಗುವುದು ಬಿಟ್ಟರೆ ಬೇರೆ ಮಾರ್ಗಗಳಿಲ್ಲ ಎಂದರು.

* ಇದನ್ನೂ ಓದಿ: ಪ್ರಧಾನಿ ಮೋದಿ ನೆಲದಲ್ಲಿ ಕಾಂಗ್ರೆಸ್‌ ಮುಖಂಡರ ಸಭೆ; ಚುನಾವಣಾ ಪ್ರಚಾರಕ್ಕೆ ಚಾಲನೆ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 10

  Angry

Comments:

0 comments

Write the first review for this !