ಗುರುವಾರ , ಆಗಸ್ಟ್ 13, 2020
21 °C

ಎಸಿಬಿ ಬಲೆಗೆ ಬಿದ್ದ ಪ್ರಾಧ್ಯಾಪಕ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸಲು ವಿದ್ಯಾರ್ಥಿಗಳ ಬಳಿ ಹಣದ ಬೇಡಿಕೆಯಿಟ್ಟಿದ್ದ ಇಲ್ಲಿನ ಒಸ್ಮಾನಿಯಾ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಒಸ್ಮಾನಿಯಾ ಕಾಲೇಜಿನ ಜನರಲ್‌ ಮೆಡಿಸಿನ್‌ ವಿಭಾಗದ ಮುಖ್ಯಸ್ಥರಾದ ಬಿ. ಬಾಲಾಜಿ ಬಂಧಿತ ಆರೋಪಿ. ವಿದ್ಯಾರ್ಥಿಗಳು ಗುರುವಾರ ನೀಡಿದ್ದ ದೂರನ್ನು ಆಧರಿಸಿ ಪ್ರಾಧ್ಯಾಪಕರ ಕಚೇರಿ ಮತ್ತು ಮನೆಯ ಮೇಲೆ ಎಸಿಬಿ ದಾಳಿ ನಡೆಸಿತ್ತು.

ಪಾಸಾಗಲು ಪ್ರತಿ ವಿದ್ಯಾರ್ಥಿ ತಲಾ ₹ 50 ಸಾವಿರ ನೀಡಬೇಕು ಎಂದು ಆರ್‌. ಶ್ರೀನು ಎಂಬುವರ ಅಕೌಂಟ್‌ ನಂಬರ್‌ ಅನ್ನು ಪ್ರಾಧ್ಯಾಪಕರು ವಾಟ್ಸ್‌ ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ಶೇರ್‌ ಮಾಡಿದ್ದರು. ಹಣ ವರ್ಗಾಯಿಸಿ ಅದರ ಸ್ಕ್ರೀನ್‌ಶಾಟ್‌ ಕಳುಹಿಸುವಂತೆಯೂ ಸೂಚಿಸಿದ್ದರು. ಅದರಂತೆ ಕೆಲ ವಿದ್ಯಾ ರ್ಥಿಗಳು ಹಣ ವರ್ಗಾವಣೆ ಮಾಡಿ ಎಸಿಬಿಗೆ ದೂರು ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು