ಬುಧವಾರ, ಜನವರಿ 22, 2020
16 °C

ನಾನೇ ಪರಮಶಿವ: ನಿತ್ಯಾನಂದ ಭಾಷಣದ ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಡಿಯೊದಲ್ಲಿನ ಚಿತ್ರ

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಸದ್ಯ ದೇಶ ತೊರೆದಿರುವ ನಿತ್ಯಾನಂದ ಇತ್ತೀಚೆಗೆ ದೇಶ ಕಟ್ಟುವುದಾಗಿ ಹೇಳಿ ಸುದ್ದಿಯಾಗಿದ್ದರು. ಈಗ ಅಜ್ಞಾತ ಸ್ಥಳದಿಂದ ವಿಡಿಯೊವೊಂದನ್ನು ಹರಿಬಿಟ್ಟಿದ್ದು, ಅದರಲ್ಲಿ ‘ನಾನೇ ಪರಮಶಿವ, ನನ್ನನ್ನು ಯಾರೂ ಏನೂ ಮಾಡಲಾರರು’ ಎಂದು ಹೇಳಿಕೊಂಡಿದ್ದಾರೆ.

‘ಸತ್ಯ ಮತ್ತು ವಾಸ್ತವವನ್ನು ತಿಳಿಸುವ ಮಾಡುವ ಮೂಲಕ ನಾನು ನನ್ನ ಶಕ್ತಿಯನ್ನು ತೋರುತ್ತೇನೆ. ಈಗ ನನ್ನನ್ನು ಯಾರಿಗೂ ಮುಟ್ಟಲು ಸಾಧ್ಯವಿಲ್ಲ. ನಾನು ನಿಮಗೆ ಸತ್ಯ ದರ್ಶನ ಮಾಡಿಸುತ್ತೇನೆ. ನಾನೇ ಪರಮ ಶಿವ. ಗೊತ್ತಾಯಿತೇ? ಸತ್ಯ ಹೇಳಿದ ಕಾರಣಕ್ಕೆ ನನ್ನನ್ನು ಯಾವುದೇ ಮೂರ್ಖ ನ್ಯಾಯಾಲಯಗಳು ಕಾನೂನು ಕ್ರಮಕ್ಕೆ ಒಳಪಡಿಸಲು ಸಾಧ್ಯವಿಲ್ಲ’ ಎಂದು ನಿತ್ಯಾನಂದ ತನ್ನ ಭಕ್ತರಿಗೆ ಹೇಳಿಕೊಂಡಿದ್ದಾರೆ.

ಇದಿಷ್ಟೇ ಅಲ್ಲ, ತನ್ನ ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವಂತೆ ವಿಡಿಯೊ ಮಾಡಿರುವ ನಿತ್ಯಾನಂದ ‘ನೀವಿಲ್ಲಿ ಸೇರುವ ಮೂಲಕ ನನ್ನೆಡೆಗೆ ನಿಷ್ಠೆಯನ್ನು ತೋರಿದ್ದಿರಿ. ನಿಮಗೆಲ್ಲ ಸಾವೇ ಇಲ್ಲ ಎಂದು ವಚನ ನೀಡುತ್ತೇನೆ’ ಎಂದಿದ್ದಾರೆ.

ಈ ವಿಡಿಯೊ ಎಂದು, ಯಾವಾಗ, ಎಲ್ಲಿ ಸೃಷ್ಟಿಯಾಯಿತು ಎಂಬ ಮಾಹಿತಿ ಇಲ್ಲ. ಅಜ್ಞಾತ ಸ್ಥಳದಲ್ಲಿ ಚಿತ್ರೀಕರಿಸಿದ ಈ ವಿಡಿಯೊ ಸದ್ಯ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದೆ.

ಇನ್ನಷ್ಟು... 

ದೇಶ ಕಟ್ಟುವುದು ವೆಬ್‌ಸೈಟ್‌ ಮಾಡಿದಂತಲ್ಲ: ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಗೇಲಿ

Explainer | ಹೊಸ ದೇಶದ ಸೃಷ್ಟಿ ಹೇಗೆ? ಏನೆಲ್ಲಾ ನಿಯಮಗಳಿವೆ?

ನಿತ್ಯಾನಂದ ಪತ್ತೆಗೆ ಬ್ಲೂ ಕಾರ್ನರ್‌ ನೋಟಿಸ್? 

ದೇಶ ತೊರೆದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಈಗ 'ಕೈಲಾಸ'ದಲ್ಲಿ ವಾಸ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು