ಸೋಮವಾರ, ಫೆಬ್ರವರಿ 17, 2020
30 °C

ಐ.ಎಸ್‌ ಸಂಪರ್ಕ: ಕೇರಳ ಯುವಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಐ.ಎಸ್‌ ಸಂಪರ್ಕ ಹೊಂದಿದ ಆರೋಪದ ಮೇಲೆ ಕೇರಳದ ಕೊಲ್ಲಂನ ಕರುನಾಗಪಳ್ಳಿಯ ಮುಹಮ್ಮದ್‌ ಫೈಜಲ್‌ ಹಮೀದ್‌ ಕಂಜು ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.

ಕೇರಳದಿಂದ ಐ.ಎಸ್‌ ಸಂಘಟನೆಗೆ ಸೇರ್ಪಡೆಯಾಗಿರುವ ಯುವಕರ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ಎನ್‌ಐಎ ಈ ಮೊದಲು ಮುಹಮ್ಮದ್‌ನ ಹೆಸರನ್ನು ಸೇರಿಸಿತ್ತು.

ಕತಾರ್‌ನಲ್ಲಿ ಈತ ಉಗ್ರರ ದಾಳಿ ಪ್ರಚೋದಿಸುವಂತಹ ಮತ್ತು ಐ.ಎಸ್‌. ಪರವಾದ ಸಂದೇಶಗಳನ್ನು ಪ್ರಚಾರ ಮಾಡುತ್ತಿದ್ದ ಎನ್ನಲಾಗಿದೆ. ವಿಚಾರಣೆಗೆ ಹಾಜರಾಗಲು ಈತನಿಗೆ ನೋಟಿಸ್‌ ನೀಡಲಾಗಿತ್ತು.

ಕತಾರ್‌ನಿಂದ ಈತ ಕೊಚ್ಚಿಯ ನೆಡುಂಬಾಶ್ಶೇರಿ ವಿಮಾನನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು.

ಐ.ಎಸ್‌. ಸಂಪರ್ಕದ ಆರೋಪದಲ್ಲಿ ಇತ್ತೀಚೆಗೆ ಬಂಧಿಸಲಾಗಿರುವ ಪಾಲಕ್ಕಾಡ್‌ ಮೂಲದ ರಿಯಾಸ್‌ ಅಬೂಬಕ್ಕರ್‌ನನ್ನು ಕೂಡ ತನಿಖಾದಳದ ಉನ್ನತ ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು