ನವದೆಹಲಿ: ವಿಜಯದಶಮಿಯಂದು ಶಸ್ತ್ರಪೂಜೆ ನೆರವೇರಿಸುವುದು ನಮ್ಮ ಸಂಪ್ರದಾಯ. ಅದರಲ್ಲಿ ತಪ್ಪೇನಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಶ್ನಿಸಿದರು.
ಹರಿಯಾಣದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು,ರಫೇಲ್ ಯುದ್ಧ ವಿಮಾನಕ್ಕೆ ಶಸ್ತ್ರಪೂಜೆ ನೆರವೇರಿಸಿದ ಮೇಲೆ ಓಂ ಎಂದು ಬರೆದೆ. ಅದು ಬಿಟ್ಟು ಇನ್ನೇನು ಬರೆಯಬೇಕಿತ್ತು ಎಂದು ಖಾರವಾಗಿ ನುಡಿದರು.
‘ನಾನು ರಫೇಲ್ ಮೇಲೆ ಓಂ ಎಂದು ಬರೆದಾಗ, ಇವರೇಕೆ ಹೀಗೆ ಬರೆದರು ಎಂದು ಕೆಲವರು ಪ್ರಶ್ನಿಸಿದರು. ಈಗ ನಾನು ರಾಹುಲ್‌ಗಾಂಧಿ ಅವರನ್ನು ಕೇಳಲು ಇಚ್ಛಿಸುತ್ತೇನೆ. ಮಾನ್ಯರೇ, ಯುದ್ಧ ವಿಮಾನದ ಮೇಲೆ ಓಂ ಎಂದು ಬರೆಯದೆ ಇನ್ನೇನು ಬರೀಬೇಕಿತ್ತು’ ಎಂದು ರಾಜನಾಥ್ ವ್ಯಂಗ್ಯವಾಡಿದರು.
ರಫೇಲ್ ಯುದ್ಧ ವಿಮಾನ ಪಡೆದುಕೊಳ್ಳಲು ರಾಜನಾಥ್ ಸಿಂಗ್ ಪ್ಯಾರೀಸ್‌ಗೆ ಹೋಗಿದ್ದನ್ನು ರಾಹುಲ್ ಗಾಂಧಿ ಟೀಕಿಸಿದ್ದರು. ‘ಬಿಜೆಪಿ ನಾಯಕರಲ್ಲಿ ಪಾಪಪ್ರಜ್ಞೆ ಇದ್ದಂತಿದೆ. ಇಲ್ಲದಿದ್ದರೆ ಮೊದಲ ವಿಮಾನ ಸ್ವೀಕರಿಸಲು ರಾಜನಾಥ್ ಸಿಂಗ್ ಪ್ಯಾರೀಸ್‌ಗೆ ಏಕೆ ಹೋಗಬೇಕಿತ್ತು’ ಎಂದು ರಾಹುಲ್ ಪ್ರಶ್ನಿಸಿದ್ದರು.
ಲೋಕಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರಾಹುಲ್ ಗಾಂಧಿ ರಫೇಲ್ ಒಪ್ಪಂದದಲ್ಲಿ ಅಕ್ರಮಗಳು ನಡೆದಿವೆ ಎಂದುಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.