ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅತ್ಯುತ್ತಮ ವಿ.ವಿಗಳಲ್ಲಿ ಬೆಂಗಳೂರಿನ ಐಐಎಸ್‌ಸಿಗೆ ಸ್ಥಾನ

Last Updated 19 ಜೂನ್ 2019, 18:36 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿಷ್ಠಿತ ಕ್ವಾಕ್‌ಕ್ವರೇಲಿ ಸೈಮಂಡ್ಸ್‌ (ಕ್ಯೂಎಸ್‌) ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹ ಸ್ಥಾನ ಪಡೆದಿದೆ.

ಲಂಡನ್‌ನಲ್ಲಿ ಬುಧವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ವಿಶ್ವದ 200 ಅತ್ಯುತ್ತಮ ವಿಶ್ವವಿದ್ಯಾಲಯ/ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಲಾಗಿದೆ. ಐಐಟಿ–ಬಾಂಬೆ, ಐಐಟಿ–ದೆಹಲಿ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇದನ್ನು ಕ್ಯೂಎಸ್‌ ಗ್ಲೋಬಲ್‌ ರ‍್ಯಾಂಕಿಂಗ್‌ ಎಂದೂ ಕರೆಯಲಾಗುತ್ತದೆ.

ಈ ಬಾರಿ ಪಟ್ಟಿಯಲ್ಲಿ ಹೊಸದಾಗಿ 50 ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ಭಾರತ ಮೂಲದ ಒ.ಪಿ.ಜಿಂದಾಲ್‌ ಗ್ಲೋಬಲ್ ವಿಶ್ವವಿದ್ಯಾಲಯ (ಜೆಜಿಯು) ಇವುಗಳಲ್ಲಿ ಒಂದು. ಇತ್ತೀಚೆಗೆ ಸ್ಥಾಪನೆಗೊಂಡು (ಸ್ಥಾಪನೆ 2009) ಕ್ಯೂಎಸ್‌ ಗ್ಲೋಬಲ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಹೆಗ್ಗಳಿಕೆಯೂ ಈ ಸಂಸ್ಥೆಯದು.

ಐಐಟಿ–ಮದ್ರಾಸ್‌, ಐಐಟಿ–ಖರಗ್‌ಪುರ, ಐಐಟಿ– ಕಾನ್ಪುರ ಹಾಗೂ ಐಐಟಿ–ರೂರ್ಕಿ ಟಾಪ್‌–400 ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಕಳೆದ ವರ್ಷ 472 ಸ್ಥಾನದಲ್ಲಿದ್ದ ಐಐಟಿ–ಗುವಾಹಟಿ ಈ ಬಾರಿ 491ನೇ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT