ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಾಯುಗಡಿ ಉಲ್ಲಂಘಿಸಿದ್ದ ಜಾರ್ಜಿಯಾದ ವಿಮಾನವನ್ನು ಇಳಿಸಿದ ಐಎಎಫ್‌

Last Updated 10 ಮೇ 2019, 16:20 IST
ಅಕ್ಷರ ಗಾತ್ರ

ರಾಜಸ್ಥಾನ: ಭಾರತದ ವಾಯು ಗಡಿಯನ್ನು ಪ್ರವೇಶಿಸಿದ ಜಾರ್ಜಿಯಾಸರಕು ಸಾಗಣೆ ವಿಮಾನವನ್ನು ಭಾರತೀಯ ವಾಯುಪಡೆ ಬಲವಂತವಾಗಿ ಇಳಿಸಿದೆ.

ಈ ವಿಮಾನಜಾರ್ಜಿಯಾದಿಂದ ಕರಾಚಿಗೆಬರುತ್ತಿದ್ದಎಎನ್-12 ಬೃಹತ್ ಕಾರ್ಗೋ ವಿಮಾನ ಭಾರತೀಯ ವಾಯು ಗಡಿಯನ್ನು ಉಲ್ಲಂಘಿಸಿದೆ. ಕೂಡಲೇ ಇದನ್ನು ಗಮನಿಸಿದ ಭಾರತೀಯ ವಾಯುಪಡೆಯ ಜೆಟ್‌ ಯುದ್ಧ ವಿಮಾನಗಳು ಬಲವಂತವಾಗಿ ಜೈಪುರದ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.

ಭಾರತೀಯ ವಾಯುಪಡೆಯ ರೇಡಿಯೊ ಕರೆಗಳನ್ನು ಸಿಬ್ಬಂದಿಗಳು ಸ್ವೀಕಾರ ಮಾಡಿಲ್ಲ ಹಾಗೂಮಾರ್ಗ ಬದಲಾವಣೆ ಮಾಡಿಕೊಂಡು 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದ ಪೈಲಟ್‌ಗಳು ಮತ್ತು ಸಿಬ್ಬಂದಿಗಳನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT