ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಹಾಲು ಹೆಚ್ಚು ಸುರಕ್ಷಿತ, ಗುಣಮಟ್ಟ ಮಾತ್ರ ಕಡಿಮೆ: ಸಮೀಕ್ಷೆ

ಎಫ್‌ಎಸ್‌ಎಸ್‌ಎಐ ವರದಿಯಲ್ಲಿ ಬಹಿರಂಗ
Last Updated 13 ನವೆಂಬರ್ 2018, 20:00 IST
ಅಕ್ಷರ ಗಾತ್ರ

ನವದೆಹಲಿ: ಕಡಿಮೆ ಗುಣಮಟ್ಟದ ಹೊರತಾಗಿಯೂ ಭಾರತದಲ್ಲಿ ದೊರೆಯುವ ಹಾಲು ಸುರಕ್ಷಿತವಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೃಢೀಕರಿಸಿದೆ.

ಭಾರತದ ಹಾಲಿನಲ್ಲಿ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುವಂತಹ ಯಾವುದೇ ಕಲಬೆರಕೆ ಕಂಡುಬಂದಿಲ್ಲ ಎಂದು ಪ್ರಾಧಿಕಾರ ಮಂಗಳವಾರ ಬಿಡುಗಡೆ ಮಾಡಿದ ‘ರಾಷ್ಟ್ರೀಯ ಹಾಲು ಗುಣಮಟ್ಟ ಸಮೀಕ್ಷೆ 2018’ ಮಧ್ಯಂತರ ವರದಿಯಲ್ಲಿ ಹೇಳಿದೆ.

ಪರೀಕ್ಷೆಗೆ ಒಳಪಡಿಸಿದ ಹಾಲಿನ ಮಾದರಿ ಮತ್ತು ಮಾನದಂಡಗಳ ಆಧಾರದಲ್ಲಿ
ಇದುವರೆಗಿನ ಅತಿ ದೊಡ್ಡ ಮತ್ತು ಶಿಸ್ತುಬದ್ಧ ಸಮೀಕ್ಷೆ ಇದಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಪರೀಕ್ಷೆಗೆ ಒಳಪಡಿಸಲಾದ ಒಟ್ಟು 6,432 ಹಾಲಿನ ಮಾದರಿಗಳ ಪೈಕಿ ಶೇ 10ಕ್ಕಿಂತ ಕಡಿಮೆ ಮಾದರಿಗಳಲ್ಲಿ ಕಲಬೆರಕೆ ಕಂಡು
ಬಂದಿದೆ. ಉಳಿದಂತೆ ಶೇ 90ರಷ್ಟು ಹಾಲಿನ ಮಾದರಿಗಳು ಶುದ್ಧವಾಗಿದ್ದು, ಸೇವನೆಗೆ ಸುರಕ್ಷಿತವಾಗಿವೆ ಎಂದು ಪ್ರಾಧಿಕಾರದ ಸಿಇಒ ಪವನ್‌ ಅಗರವಾಲ್‌ ತಿಳಿಸಿದ್ದಾರೆ.

ಜಾನುವಾರುಗಳಿಗೆ ನೀಡಲಾಗುವ ಕಳಪೆ ಗುಣಮಟ್ಟದ ಮೇವು ಮತ್ತು ಅವೈಜ್ಞಾನಿಕ ಹಾಗೂ ಅಸುರಕ್ಷಿತ ಹೈನುಗಾರಿಕೆ ಪದ್ಧತಿ ಇದಕ್ಕೆ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಯಾವ ಭಾಗದ ಹಾಲಿನಲ್ಲಿ ಕಲಬೆರಕೆ ಮತ್ತು ವಿಷಕಾರಿ ರಾಸಾಯನಿಕಗಳು ಕಂಡುಬಂದಿವೆ ಎನ್ನುವ ಅಂಶವನ್ನು ಎಫ್‌ಎಸ್‌ಎಸ್‌ಎಐ ಬಹಿರಂಗಪಡಿಸಿಲ್ಲ.

ಬೆಳ್ಳಗಿರುವುದೆಲ್ಲ ಹಾಲಲ್ಲ!

ಹಾಲು ಬಹಳ ಹೊತ್ತು ಕೆಡದಂತೆ ರಕ್ಷಿಸಲು ಯೂರಿಯಾ ಬೆರೆಸುತ್ತಾರೆ. ಅದನ್ನು ಹೊರತುಪಡಿಸಿದರೆ ಮಾರ್ಜಕ, ಗ್ಲುಕೋಸ್‌, ಅಡುಗೆ ಎಣ್ಣೆ, ಅಮೋನಿಯಂ ಸಲ್ಫೇಟ್‌ ಸೇರಿಸುತ್ತಾರೆ.

ಜಾನುವಾರು ರೋಗಗಳಿಗೆ ನೀಡುವ ಆಕ್ಸಿ–ಟೆಟ್ರಾಸೈಕ್ಲಿನ್‌ ಔಷಧ ಮತ್ತು ಆಹಾರದ ಲ್ಲಿಯ ರಾಸಾಯನಿಕಗಳು ಹಾಲಿನಲ್ಲಿ ಸೇರು ವುದು ಸಾಮಾನ್ಯ. ಜಾನುವಾರುಗಳಿಗೆ ನೀಡಲಾಗುವ ಜೀವನಿರೋಧಕ ಲಸಿಕೆ, ಕೀಟನಾಶಕ, ರಸಗೊಬ್ಬರ ಮತ್ತು ವಿಷಕಾರಿ ರಾಸಾಯನಿಕಗಳು ಹಾಲಿನಲ್ಲಿ ಪತ್ತೆಯಾಗಿವೆ. 6,432 ಹಾಲಿನ ಮಾದರಿಗಳ ಪೈಕಿ 195 ಮಾದರಿಯಲ್ಲಿ ಅಮೋನಿಯಂ ಸಲ್ಫೇಟ್‌ ಪತ್ತೆಯಾಗಿದೆ.

ಸಮಗ್ರ ವರದಿ

ದೇಶದ 29 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 1,100 ಪಟ್ಟಣಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ.

2018ರ ಮೇ ತಿಂಗಳಿಂದ ಅಕ್ಟೋಬರ್‌ವರೆಗೆ ಆರು ತಿಂಗಳು ಸಮೀಕ್ಷೆ ನಡೆಸಲಾಗಿದೆ.

ಈ ಹಿಂದೆ 2011 ಮತ್ತು 2016ರಲ್ಲಿ ಎರಡು ಬಾರಿ ಪ್ರಾಧಿಕಾರವು ತನ್ನ ಪ್ರಾದೇಶಿಕ ಕಚೇರಿ ಮತ್ತು ರಾಜ್ಯಗಳ ಆಹಾರ ಪ್ರಾಧಿಕಾರಗಳ ನೆರವಿನೊಂದಿಗೆ ಇಂತಹ ಸಮೀಕ್ಷೆ ನಡೆಸಿತ್ತು. ಆದರೆ, ಆ ಎರಡು ಸಮೀಕ್ಷೆಗಳು ಇಷ್ಟು ಸಮಗ್ರವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT