ನವದೆಹಲಿ:ಕೋವಿಡ್ ಭೀತಿಯಿಂದಾಗಿ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವ ಕಾರಣ ಮಾರ್ಚ್ 20ರಿಂದ ಮಾರ್ಚ್ 30ರವರೆಗಿರುವ84 ರೈಲುಗಳನ್ನು ರದ್ದು ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಕಳೆದ ಮೂರು ದಿನಗಳಿಂದ ಇಲ್ಲಿಯವರೆಗೆ ರದ್ದಾಗಿರುವ ರೈಲುಗಳ ಸಂಖ್ಯೆ 155 ಆಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳ ಹೇಳಿದ್ದಾರೆ. ಈ ಹಿಂದೆ ರೈಲ್ವೆ ಇಲಾಖೆ 71 ರೈಲುಗಳನ್ನು ರದ್ದು ಮಾಡಿತ್ತು.

ಕಳೆದ ಕೆಲವು ದಿನಗಳಿಂದ ಶೇ.60ರಷ್ಟು ರೈಲ್ವೆ ಟಿಕೆಟ್‌ಗಳು ರದ್ದಾಗುತ್ತಿವೆ. ಎಲ್ಲ ವಲಯಗಳಲ್ಲಿಯೂ ಟಿಕೆಟ್ ರದ್ದಾಗುತ್ತಲೇ ಇದೆ. ಟಿಕೆಟ್ ರದ್ದು ಮಾಡುವಾಗ ಪ್ರಯಾಣಿಕರಿಂದಯಾವುದೇ ಶುಲ್ಕ ವಸೂಲಾತಿ ಮಾಡುವುದಿಲ್ಲ. ಟಿಕೆಟ್‌ನ ಮೊತ್ತವನ್ನೇ ಪ್ರಯಾಣಿಕರಿಗೆ ಮರಳಿಸುತ್ತಿದ್ದೇವೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಅದೇ ವೇಳೆ ಅನಗತ್ಯ ಪ್ರಯಾಣ ಕೈಗೊಳ್ಳಬೇಡಿ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಮನವಿ ಮಾಡಿದ್ದಾರೆ. ಮಂಗಳವಾರ ರೈಲ್ವೆ ಅಧಿಕಾರಿಗಳ ಪುನರ್‌ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್, ಕೊರೊನಾ ಸೋಂಕು ಹರಡದಂತೆ ರೈಲ್ವೆ ಇಲಾಖೆಯ ಎಲ್ಲ ವಲಯಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.