ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಹತ್ತು ದಿನಗಳಲ್ಲಿ ಸಂಚರಿಸಲಿವೆ ಇನ್ನೂ 2600 ಶ್ರಮಿಕ ವಿಶೇಷ ರೈಲುಗಳು

Last Updated 23 ಮೇ 2020, 13:01 IST
ಅಕ್ಷರ ಗಾತ್ರ

ನವದೆಹಲಿ: ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ಸಲುವಾಗಿ ಮುಂದಿನ 10 ದಿನಗಳಲ್ಲಿ ಇನ್ನೂ 2,600 ಶ್ರಮಿಕ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಶನಿವಾರ ಘೋಷಿಸಿದೆ.

ಈ ನಿರ್ಧಾರದಿಂದ 36 ಲಕ್ಷ ವಲಸೆ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಹೇಳಿದ್ದಾರೆ.

ಕಳೆದ 23 ದಿನಗಳಲ್ಲಿ 2,600 ಶ್ರಮಿಕ ವಿಶೇಷ ರೈಲುಗಳು ದೇಶದಾದ್ಯಂತ ಸಂಚಾರ ಮಾಡಿವೆ. ಈವರೆಗೆ ಸುಮಾರು 36 ಲಕ್ಷ ವಲಸೆ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ವಲಸೆ ಕಾರ್ಮಿಕರಿಗಾಗಿ ಶ್ರಮಿಕ ವಿಶೇಷ ರೈಲುಗಳ ವ್ಯವಸ್ಥೆ ಮಾಡಲು ಭಾರತೀಯ ರೈಲ್ವೆ ಸದಾ ಸಿದ್ಧವಿದೆ ಎಂದೂ ಅವರು ಹೇಳಿದ್ದಾರೆ.

ಮೇ 12ರ ಬಳಿಕ ಶ್ರಮಿಕ ವಿಶೇಷ ರೈಲುಗಳನ್ನು ಹೊರತುಪಡಿಸಿ ಭಾರತೀಯ ರೈಲ್ವೆಯು 15 ಜೋಡಿ ವಿಶೇಷ ಎಸಿ ರೈಲುಗಳನ್ನು ಸಂಚಾರಕ್ಕಿಳಿಸಿದ್ದು ಅವುಗಳ ಶೇ 98ರಷ್ಟು ಟಿಕೆಟ್‌ಗಳು ಈಗಾಗಲೇ ಕಾಯ್ದಿರಿಸಲಾಗಿದೆ. ಜೂನ್‌ 1ರಿಂದ ಇನ್ನೂ 200 ರೈಲುಗಳು ಕಾರ್ಯಾರಂಭ ಮಾಡಲಿದ್ದು, ಅವುಗಳ ಶೇ 30ರಷ್ಟು ಟಿಕೆಟ್‌ಗಳೂ ಕಾಯ್ದಿರಿಸಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT