ಬುಧವಾರ, ಜೂಲೈ 8, 2020
21 °C

‘ಕೋವ್ಯಾಕ್ಸಿನ್‌’ಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮನುಷ್ಯರ ಮೇಲೆ ಪ್ರಾಯೋಗಿಕ ಚಿಕಿತ್ಸೆಗೆ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕೋವಿಡ್–‌ 19 ವ್ಯಾಕ್ಸಿನ್ ಕ್ಯಾಂಡಿಡೇಟ್‌ಗೆ‌ (ಸಂಭಾವ್ಯ ಲಸಿಕೆ) ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ.   

ಭಾರತ್‌ ಬಯೊಟೆಕ್ ‘ಕೋವ್ಯಾಕ್ಸಿನ್‌’ ಸಂಭಾವ್ಯ ಲಸಿಕೆಯನ್ನು‌  ಅಭಿವೃದ್ಧಿ ಪಡಿಸಿದೆ. ಇದಕ್ಕೆ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ ಪ್ರತ್ಯೇಕಿಸಿರುವ ಕೋವಿಡ್‌–19 ಜಿನೋಮ್‌ ಅನ್ನು ಉಪಯೋಗಿಸಲಾಗಿದೆ. 

‘ಕೋವಿಡ್‌–19 ವಿರುದ್ಧ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಮೊದಲ ಲಸಿಕೆ ಎಂಬ ಶ್ರೇಯ ಕೋವ್ಯಾಕ್ಸಿನ್‌ ಆಗಿದೆ, ಇದು ಹೆಮ್ಮೆ ಪಡುವ ವಿಷಯ’ ಎಂದು ಭಾರತ್‌ ಬಯೊಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಯೆಲ್ಲ ತಿಳಿಸಿದ್ದಾರೆ. 

ಕಂಪನಿಯು ಔಷಧದ ಸುರಕ್ಷತೆ, ರೋಗ ನಿರೋಧಕತೆ ಫಲಿತಾಂಶ ಮತ್ತು ಚಿಕಿತ್ಸಾ ಪೂರ್ವ ಸ್ಥಿತಿಯ ಮಾಹಿತಿಯನ್ನು ಸಲ್ಲಿಸಲಾಗಿತ್ತು. ಇದನ್ನು ಆಧರಿಸಿ ಮೊದಲ ಮತ್ತು ಎರಡನೇ ಹಂತದ ಪ್ರಾಯೋಗಿಕ ಚಿಕಿತ್ಸೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಮಹಾನಿರ್ದೇಶಕ ಅನುಮತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.   

ಜುಲೈ ತಿಂಗಳಿಂದ ದೇಶದಾದ್ಯಂತ ಪ್ರಾಯೋಗಿಕ ಚಿಕಿತ್ಸೆ ನಡೆಸಲಾಗುವುದು. ಲಸಿಕೆಯು ಸುರಕ್ಷಿತವಾಗಿದ್ದು, ಉತ್ತಮ ಫಲಿತಾಂಶ ನೀಡಲಿದೆ ಎಂದು ಅವರು ಹೇಳಿದ್ದಾರೆ.   

ಜಗತ್ತಿನಾದ್ಯಂತ ಸುಮಾರು 140 ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇವುಗಳಲ್ಲಿ 16 ಲಸಿಕೆ ಮಾತ್ರ ಚಿಕಿತ್ಸೆಗೆ ಬಳಸಲಾಗುತ್ತಿದೆ. ಚೀನಾದ 5, ಅಮೆರಿಕದ 3, ಇಂಗ್ಲೆಂಡ್‌ನ 2 ಮತ್ತು ಜರ್ಮನಿ, ಆಸ್ತ್ರೇಲಿಯಾ, ರಷ್ಯಾದ ತಲಾ ಒಂದು ಲಸಿಕೆ ಸೇರಿವೆ ಎಂದು ವಿಶ್ವಸಂಸ್ಥೆ ಹೇಳಿತ್ತು.    

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು