ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ಅತ್ಯಾಧುನಿಕ ಸಮರ ನೌಕೆ ‘ಐಎನ್‌ಎಸ್‌ ನೀಲಗಿರಿ’ 28ರಂದು ನೌಕಾಪಡೆಗೆ

Last Updated 27 ಸೆಪ್ಟೆಂಬರ್ 2019, 10:40 IST
ಅಕ್ಷರ ಗಾತ್ರ

ಭಾರತದಲ್ಲೇ ತಯಾರಿಸಲಾದ ಅತ್ಯಾಧುನಿಕ ಸಮರ ನೌಕೆ ‘ಐಎನ್‌ಎಸ್‌ ನೀಲಗಿರಿ’ಯನ್ನುಇದೇ 28ರಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಗೆ ನಿಯೋಜನೆ ಮಾಡಲಿದ್ದಾರೆ. ಅದೇ ಸಂದರ್ಭದಲ್ಲಿ ಅವರು ಸ್ಕಾರ್ಪೀನ್ ಸರಣಿಯ 2ನೇ ಸಮರ ಜಲಾಂತರ್ಗಾಮಿ ‘ಐಎನ್‌ಎಸ್ ಖಾಂಡೇರಿ’ ಯನ್ನೂ ನೌಕಾಪಡೆಯ ಸೇವೆಗೆ ನಿಯೋಜಿಸಲಿದ್ದಾರೆ.

ನೀಲಗಿರಿ ಸರಣಿ

ಬ್ರಿಟನ್‌ನ ‘ಲಿಯಾಂಡರ್’ ಸರಣಿಯ ಯುದ್ಧನೌಕೆಗಳ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಎರವಲು ಪಡೆದು, ಭಾರತದಲ್ಲೇ ನಿರ್ಮಿಸಿದ ಮೊದಲ ಯುದ್ಧನೌಕೆ ಐಎನ್‌ಎಸ್‌ ನೀಲಗಿರಿ. ಈ ಸರಣಿಯಲ್ಲಿ ಒಟ್ಟು ಆರು ಯುದ್ಧನೌಕೆಗಳನ್ನು ನಿರ್ಮಿಸಲಾಗಿತ್ತು. ಅವೆಲ್ಲವೂ ಈಗ ಸೇವೆಯಿಂದ ನಿವೃತ್ತವಾಗಿವೆ. ಅವೇ ಹೆಸರಿನಲ್ಲಿ ಈಗ ಹೊಸದಾಗಿ ಏಳು ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ ಐಎನ್‌ಎಸ್‌ ನೀಲಗಿರಿ ಮೊದಲನೆಯದ್ದು. ಈ ಸರಣಿಯ ಇತರ ನೌಕೆಗಳು ಮತ್ತು ತಾಂತ್ರಿಕ ವಿವರ

* ಐಎನ್‌ಎಸ್‌ ಹಿಮಗಿರಿ

* ಐಎನ್‌ಎಸ್‌ಉದಯಗಿರಿ

* ಐಎನ್‌ಎಸ್‌ ದುನಾಗಿರಿ

* ಐಎನ್‌ಎಸ್‌ ತಾರಾಗಿರಿ

* ಐಎನ್‌ಎಸ್‌ ವಿಂಧ್ಯಾಗಿರಿ

* ಐಎನ್‌ಎಸ್‌ ಮಹೇಂದ್ರಗಿರಿ

* ಐಎನ್‌ಎಸ್‌ ನೀಲಗಿರಿಯ ಮಾದರಿ

* 4 ಎಂಜಿನ್‌ಗಳನ್ನು ಹೊಂದಿದೆ

* 28 ನಾಟಿಕಲ್ ಮೈಲಿ (ಸುಮಾರು 52 ಕಿ.ಮೀ.) ನೌಕೆಯ ಗರಿಷ್ಠ ವೇಗ

* 5,500 ನಾಟಿಕಲ್ ಮೈಲಿ (10,186 ಕಿ.ಮೀ.) ಒಮ್ಮೆ ಇಂಧನ ಭರ್ತಿ ಮಾಡಿದರೆ ನೌಕೆ ಕ್ರಮಿಸುವ ಗರಿಷ್ಠ ದೂರ

* ಬರಾಕ್ ಕ್ಷಿಪಣಿ– ನೌಕೆಯಿಂದ ಆಗಸಕ್ಕೆ ಉಡಾಯಿಸಬಹುದಾದ ಕ್ಷಿಪಣಿ

* ಬ್ರಹ್ಮೋಸ್ ಕ್ಷಿಪಣಿ– ನೌಕೆಯಿಂದ ನೌಕೆಗೆ–ನೆಲದ ಮೇಲಿನ ಗುರಿಯತ್ತ ಉಡಾಯಿಸಬಹುದಾದ ಸೂಪರ್‌ಸಾನಿಕ್ ಕ್ಷಿಪಣಿ

* ಇಸ್ರೇಲ್ ನಿರ್ಮಿತ ರೇಡಾರ್

* ಟಾರ್ಪೆಡೊಗಳು

* 76 ಎಂಎಂನ ಫಿರಂಗಿ

* ಸೋನಾರ್ ಸಂವೇದಕಗಳು

ಬೃಹತ್ ಹಡಗುಕಟ್ಟೆ

ಮುಂಬೈನ ನೌಕಾನೆಲೆಯಲ್ಲಿ ನಿರ್ಮಿಸಿರುವ ಹಡಗುಕಟ್ಟೆಯನ್ನೂ ರಾಜನಾಥ್ ಸಿಂಗ್ ಅವರು ಸೆಪ್ಟೆಂಬರ್ 28ರಂದು ಉದ್ಘಾಟಿಸಲಿದ್ದಾರೆ. ಭಾರತದ ಅತ್ಯಂತ ದೊಡ್ಡ ವಿಮಾನವಾಹನ ನೌಕೆ ‘ಐಎನ್‌ಎಸ್‌ ವಿಕ್ರಮಾದಿತ್ಯ’ವನ್ನು ಲಂಗರು ಹಾಕಬಹುದಾದಷ್ಟು ಈ ಹಡಗುಕಟ್ಟೆ ದೊಡ್ಡದಾಗಿದೆ

₹1,320 ಕೋಟಿ ಹಡಗುಕಟ್ಟೆಯ ನಿರ್ಮಾಣದ ವೆಚ್ಚ

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT