ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮಾತೃಭಾಷಾ ದಿನಾಚರಣೆ: ಹಿಂದಿ ಹೇರಿಕೆಗೆ ಆಕ್ಷೇಪ

Last Updated 21 ಫೆಬ್ರುವರಿ 2020, 11:18 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು:ಫೆ.21ರಂದುಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಂತರರಾಷ್ಟ್ರೀಯ ಭಾಷಾ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವರುಶುಭಾಶಯ ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದು, ಎಲ್ಲರೂ ಮಾತೃಭಾಷಾ ದಿನವನ್ನು ಕೇವಲ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಹಂಚಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ.

ಆದರೆ, ಬಾಂಗ್ಲಾ ದೇಶದಲ್ಲಿ ಮಾತ್ರ ಈ ದಿನವನ್ನು ಅಧಿಕೃತವಾಗಿ ಅದ್ದೂರಿಯಿಂದಮಾತೃಭಾಷಾ ದಿನವನ್ನಾಗಿ ಆಚರಿಸುತ್ತಿದ್ದಾರೆ. ಏಕೆಂದರೆ ಇದೇ ದಿನ ಬಾಂಗ್ಲಾ ಭಾಷೆ ರಾಷ್ಟ್ರೀಯ ಭಾಷೆಯಾಗಿ ಅಧಿಕೃತವಾಗಿ ಮಾನ್ಯತೆ ಪಡೆದುಕೊಂಡಿದೆ.

ಬಿ ಪ್ಯಾಕ್ ಟ್ವಿಟರ್ ನಲ್ಲಿ ನಮ್ಮ ಮಾತೃಭಾಷೆ ಎಂಬ ಟೈಟಲ್‌ನಲ್ಲಿ ರಾಜ್ಯದ ಎಲ್ಲಾ ಭಾಷೆಗಳ ಹೆಸರನ್ನು ಕೂಡಿಸಿ 'ಅಂತರರಾಷ್ಟ್ರೀಯ ಮಾತೃಭಾಷಾ ದಿನ'ದಶುಭಾಶಯ ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಕನ್ನಡ ಅಧಿಕೃತವಾಗಿ ಮಾತೃಭಾಷೆಯಾಗಿದ್ದು,ತುಳು ಮತ್ತು ಕೊಡವ ಭಾಷೆ ಮಾತನಾಡುವ ಜನರೂ ಇದ್ದಾರೆ. ಎಲ್ಲರಿಗೂಮಾತೃಭಾಷಾ ದಿನದ ಶುಭಾಶಯ ಎಂದು ತಿಳಿಸಲಾಗಿದೆ.

ಹಿನ್ನೆಲೆ

ಪ್ರಥಮ ಬಾರಿಗೆಈ ದಿನವನ್ನು ಮಾತೃಭಾಷಾ ದಿನವನ್ನಾಗಿ ಆಚರಿಸಲು ಸೂಚಿಸಿದ್ದು ಬಾಂಗ್ಲಾದೇಶ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ಸಂಘಟನೆ (ಯುನೆಸ್ಕೋ) 1999ರಲ್ಲಿ ಈ ದಿನವನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲು ಆರಂಭಿಸಿತು.

ಯುನೆಸ್ಕೋ ಕೇಂದ್ರ ಕಚೇರಿ

ವಿಶ್ವಸಂಸ್ಥೆ 2000ರಲ್ಲಿಎಲ್ಲಾ ರಾಷ್ಟ್ರಗಳ ಭಾಷೆಗಳ ಪರಿಸ್ಥಿತಿ ಅಧ್ಯಯನ ನಡೆಸಿತು. ಆ ಸಮಯದಲ್ಲಿಒಂದು ರಾಷ್ಟ್ರದಲ್ಲಿ ಒಂದೇ ಭಾಷೆ, ಒಂದೇ ರೀತಿ ಸಂಸ್ಕೃತಿ ಆಚರಿಸುವ ಜನರು ಇರುವುದಿಲ್ಲ,ವಿವಿದತೆಯಲ್ಲಿ ಏಕತೆ ಕಾಣಬೇಕಾದರೆ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಭಾಷೆಯೂ ಒಂದುಪ್ರಮುಖ ಅಂಶಎಂಬುದನ್ನು ಮನಗಂಡ ವಿಶ್ವಸಂಸ್ಥೆ ಫೆ.21 ಅಧಿಕೃತವಾಗಿಮಾತೃಭಾಷಾ ದಿನ ಆಚರಿಸಲು ಘೋಷಿಸಿತು.

ಒಂದು ದೇಶದಲ್ಲಿ ಶಾಂತಿ ಸಹಿಷ್ಣುತೆ ನೆಲೆಸಬೇಕಾದರೆ, ವಿವಿಧ ಸಂಸ್ಕೃತಿಯ, ಭಾಷೆಯ ಜನರು ಒಬ್ಬರಿಗೊಬ್ಬರು ಅರಿತು ನಡೆಯಬೇಕು, ಬಾಳಬೇಕು ಎಂಬ ಧ್ಯೇಯದೊಂದಿಗೆಮಾತೃಭಾಷಾ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.

ಉದ್ದೇಶ

ಪ್ರಪಂಚದ ಜನಸಂಖ್ಯೆಯಲ್ಲಿ ಶೇ.40ರಷ್ಟು ಜನರು ಭಾಷಾ ಸಮಸ್ಯೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ವ್ಯಕ್ತಿ ಅಭಿವೃದ್ಧಿ ಹೊಂದಬೇಕಾದರೆ, ಬಾಲ್ಯದಲ್ಲಿಯೇ ವಿವಿಧ ಭಾಷೆಗಳಲ್ಲಿ ಶಿಕ್ಷಣ ಪಡೆಯಬೇಕು. ಈ ಅಭಿವೃದ್ಧಿಗೆ ಭಾಷೆಯ ಸಮಸ್ಯೆ ಅಡ್ಡಿಯಾಗಿದೆ. ಆದ್ದರಿಂದ ಪ್ರಪಂಚದ ಎಲ್ಲಾ ಮೂಲೆಮೂಲೆಗಳ ಸಣ್ಣ ಸಣ್ಣ ಭಾಷೆಗಳ ಅಭಿವೃದ್ಧಿಯಾದರೆ, ಆ ಜನರ ಶೈಕ್ಷಣಿಕ ಅಭಿವೃದ್ಧಿಯಾಗುತ್ತದೆ. ವೈಜ್ಞಾನಿಕ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಆ ಮೂಲಕ ಇಡೀ ವಿಶ್ವದ ಎಲ್ಲಾ ಜನರುಅವರ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬಹುದುಎಂದು ವಿಶ್ವಸಂಸ್ಥೆ ಹೇಳಿದೆ.

ಕೇಂದ್ರದ ಹಿಂದಿ ಹೇರಿಕೆಗೆ ವಿರೋಧ

ಯುನೆಸ್ಕೋ ಬಹುಭಾಷಿಕ ವ್ಯವಸ್ಥೆಯ ಅಭಿವೃದ್ಧಿಗೆ ಒತ್ತುಕೊಡಬೇಕು ಎಂದು ಹೇಳಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಹಿಂದಿ ಭಾಷೆಯನ್ನೇ ಎಲ್ಲರೂ ಮಾತನಾಡಬೇಕು ಎಂದು ಬಲವಂತವಾಗಿ ಎಲ್ಲಾ ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಿದೆ. ಹಿಂದಿ ಮಾತನಾಡದಿದ್ದರೆ, ಅಂತಹವರನ್ನುದ್ವಿತೀಯ ದರ್ಜೆ ನಾಗರೀಕರಂತೆ ಕಾಣಲಾಗುತ್ತಿದೆ. ಏಕೆಂದರೆ,ನಮ್ಮ ಸಂವಿಧಾನದ 343-351ರಲ್ಲಿ ಈ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗಿದೆಎಂದು ಶ್ರುತಿ ಎಂ.ಎಚ್ ಎಂಬುವವರು ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT