ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿರುದ್ಧ ಪಾಕ್ ಸಂಚು: ಜೈಲಿನಲ್ಲಿದ್ದ ಉಗ್ರ ಮಸೂದ್‌ ಸದ್ದಿಲ್ಲದೆ ಬಿಡುಗಡೆ

ಕೇಂದ್ರಕ್ಕೆ ಮಾಹಿತಿ ನೀಡಿದ ಗುಪ್ತಚರ ಇಲಾಖೆ
Last Updated 9 ಸೆಪ್ಟೆಂಬರ್ 2019, 3:14 IST
ಅಕ್ಷರ ಗಾತ್ರ

ನವದೆಹಲಿ: ಭಾರತ ವಿರುದ್ಧ ಇಸ್ಲಾಮಾಬಾದ್‌ ಭಾರಿ ಸಂಚು ರೂಪಿಸುತ್ತಿದ್ದು, ಇದಕ್ಕಾಗಿ ಜಾಗತಿಕ ಉಗ್ರ ಹಣೆಪಟ್ಟಿಯ ಜೈಷ್‌–ಎ–ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಸದ್ದಿಲ್ಲದೆ ಜೈಲಿನಿಂದ ಬಿಡುಗಡೆ ಮಾಡಿದೆ ಎಂದ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.

ಜಮ್ಮು ಮತ್ತು ಕಾಶ್ಮಿರದಲ್ಲಿ ಜಾರಿಯಲ್ಲಿದ್ದ 370ನೇ ವಿಧಿ ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರಿ ಸಂಚು ರೂಪಿಸುತ್ತಿದೆ. ಅದರಭಾಗವಾಗಿಯೇ ರಾಜಸ್ಥಾನ ಹಾಗೂ ಜಮ್ಮುಬಳಿಯ ಭಾರತ–ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಹೆಚ್ಚುವರಿ ಸೈನಿಕರನ್ನು ಪಾಕ್‌ ನಿಯೋಜಿಸುತ್ತಿದೆ ಎಂದುಅಧಿಕಾರಿಗಳು ಎಚ್ಚರಿಕೆಯ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನಯಾವಾಗಲಾದರೂ ದಾಳಿ ನಡೆಸಬಹುದು ಎಲ್ಲದಕ್ಕೂ ಸಿದ್ದವಾಗಿರಿ ಎನ್ನುವಂತೆ ಗುಪ್ತಚರ ಇಲಾಖೆ ಜಮ್ಮು ಹಾಗೂ ರಾಜಸ್ಥಾನ ಗಡಿ ಭದ್ರತಾ ಪಡೆಗೆ ತಿಳಿಸಿದೆ. ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ‍ಪಾಕಿಸ್ತಾನ ಸದ್ದಿಲ್ಲದೆ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಿದೆ. ಬೇರೆ ಭಯೋತ್ಪಾದನ ಸಂಘಟನೆಗಳೂ ಬಹಿರಂಗವಾಗಿಯೇಕೆಲಸ ಮಾಡುತ್ತಿವೆಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮಿರದ ಪುಲ್ವಾಮದಲ್ಲಿ ಫೆಬ್ರುವರಿ 14ರಂದು ನಡೆದ ಬಾಂಬ್‌ ದಾಳಿಯ ಸಂಚುಕೋರ ಎಂದು ವಿವಿಧ ವರದಿಗಳು ಬಂದನಂತರ ಪಾಕಿಸ್ತಾನ ಅಜರ್‌ನನ್ನು ರಕ್ಷಣಾ ಬಂಧನದಲ್ಲಿರಿತ್ತು.

‘ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಭಾರತದ ನಡೆಗೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು’ ಎಂದು ಶುಕ್ರವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಬೆದರಿಕೆಯ ಸಂದೇಶ ರವಾನಿಸಿದ್ದರು.ಜೊತೆಗೆ ಪಾಕಿಸ್ತಾನದಸೇನಾ ಮುಖ್ಯಸ್ಥಜನರಲ್ ಖಮರ್‌ ಜಾವೇದ್‌, ‘ಕಾಶ್ಮೀರಕ್ಕಾಗಿ ನಾವು ಯಾವ ಹಂತಕ್ಕಾಗಿಹೋಗುತ್ತೇವೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT