ಮಂಗಳವಾರ, ನವೆಂಬರ್ 12, 2019
24 °C

ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ ಅಳವಡಿಕೆ ಕಡ್ಡಾಯ: ಯುಜಿಸಿ

Published:
Updated:

ನವದೆಹಲಿ: ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್‌ ಜಾಮರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಆದೇಶಿಸಿದೆ. ‌

ರೇಡಿಯೊ ತರಂಗಾಂತರ ಆಧರಿಸಿದ ಉಪಕರಣಗಳನ್ನು ಬಳಸಿ ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕಡಿಮೆ ಸಾಮರ್ಥ್ಯದ ಜಾಮರ್‌ಗಳನ್ನು ಅಳವಡಿಸಲು ಪರೀಕ್ಷೆ ನಡೆಸುವ ಕೇಂದ್ರಗಳಿಗೆ 2016ರಲ್ಲಿ ಸರ್ಕಾರ ಸೂಚಿಸಿತ್ತು.

ಇದೀಗ ಕುಲಪತಿಗಳಿಗೆ ಮತ್ತು ಕಾಲೇಜು ಪ್ರಾಂಶುಪಾಲರಿಗೆ ಪತ್ರ ಬರೆದಿರುವ ಆಯೋಗ, ಜಾಮರ್‌ಗಳ ಅಳವಡಿಕೆಗೆ ಸಂಬಂಧಿಸಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ.  ಪರೀಕ್ಷಾ ಕೇಂದ್ರದ 100 ಮೀಟರ್‌ ವ್ಯಾಪ್ತಿಯಲ್ಲಿ ಬೇಸ್ ಟ್ರಾನ್ಸ್‌ ರಿಸೀವರ್‌ ಸ್ಟೇಷನ್‌ (ಬಿಟಿಎಸ್‌) ಇಲ್ಲದೇ ಇರುವ ಕಡೆಗಳಲ್ಲಿ ಈ ರೀತಿಯ ಜಾಮರ್‌ ಮಾದರಿಗಳನ್ನು ಅಳವಡಿಸುವಂತೆ ಯುಜಿಸಿಯ ಅಧಿಕಾರಿಗಳ ಮಂಡಳಿಯು ಹೇಳಿದೆ.

ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಇಸಿಐಎಲ್‌) ಮತ್ತು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಕಂಪನಿಗಳು ಜಾಮರ್‌ಗಳನ್ನು ಬಾಡಿಗೆ ಆಧಾರದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಪೂರೈಸಲಿವೆ.

ಪ್ರತಿಕ್ರಿಯಿಸಿ (+)