ಮಂಗಳವಾರ, ಆಗಸ್ಟ್ 16, 2022
20 °C

ಕಾಶ್ಮೀರ: ಜೆಕೆಎಲ್‍ಎಫ್ ಅಧ್ಯಕ್ಷ ಯಾಸಿನ್ ಮಲಿಕ್, ಜಮಾತ್ ನಾಯಕರು ಪೊಲೀಸ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಅಧ್ಯಕ್ಷ ಯಾಸಿನ್ ಮಲಿಕ್‍ನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಫೆಬ್ರುವರಿ 14ರಂದು ನಡೆದ ಭಯೋತ್ಪಾದನಾ ದಾಳಿ ನಂತರ ಜಮಾತ್ ಎ ಇಸ್ಲಾಮಿ ಸಂಘಟನೆಗೆ ಸೇರಿದ 24 ಮಂದಿಯನ್ನು ಕಾಶ್ಮೀರದ ವಿವಿಧ ಭಾಗಗಳಿಂದ ಬಂಧಿಸಲಾಗಿದೆ. ಈ ಕಾರ್ಯಾಚರಣೆ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪೊಲೀಸರು ಈ ರೀತಿ ಬಂಧಿಸಿರುವುದರಿಂದ ನಮ್ಮ ಧರ್ಮದ ಜನರ ಮೇಲೆ ಮತ್ತಷ್ಟು ಸಂದೇಹಗಳಿಗೆ ಇದು ಆಸ್ಪದ ನೀಡಿದೆ ಎಂದು ಜಮಾತ್ ಎ ಇಸ್ಲಾಮಿ ಸಂಘಟನೆ ಹೇಳಿದೆ.

 ಫೆಬ್ರುವರಿ 22- 23ರ  ರಾತ್ರಿ ಹೊತ್ತಲ್ಲಿ ಪೊಲೀಸರು ಕಾಶ್ಮೀರದ ಕಣಿವೆ ಜಿಲ್ಲೆಯಲ್ಲಿರುವ ತಮ್ಮ ಸಂಘಟನೆಯ ಪ್ರಮುಖ  ಮುಖಂಡರನ್ನು ಬಂಧಿಸಿದ್ದಾರೆ ಎಂದು ಜಮಾತ್ ಸಂಘಟನೆ ಹೇಳಿಕೆ ನೀಡಿದೆ.

ಡಾ. ಅಬ್ದುಲ್ ಹಮೀದ್ ಫಯಾಜ್, ನ್ಯಾಯವಾದಿ ಝಹೀದ್ ಅಲಿ (ವಕ್ತಾರ), ಗುಲಾಂ ಖದೀರ್ ಲೋನ್ ಸೇರಿದಂತೆ ಹಲವಾರು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಸಂವಿಧಾನದ ಕಲಂ 35 ಎ ಬಗ್ಗೆ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು