ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್ ಫಲಿತಾಂಶ: ಈವರೆಗೆ ಯಾವುದೇ ಮುಖ್ಯಮಂತ್ರಿ 2 ಸಲ ಗೆದ್ದಿಲ್ಲ

Last Updated 23 ಡಿಸೆಂಬರ್ 2019, 4:36 IST
ಅಕ್ಷರ ಗಾತ್ರ

ಜಾರ್ಖಂಡ್‌ನಲ್ಲಿ ಈವರೆಗೆ ಯಾವುದೇ ಮುಖ್ಯಮಂತ್ರಿ ಎರಡನೇ ಅವಧಿಗೆ ಚುನಾಯಿತರಾಗಿಲ್ಲ. ಈಗ ಅಧಿಕಾರದಲ್ಲಿರುವ, ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿರುವ ರಘುವರ ದಾಸ್‌ ಈ ಪರಂಪರೆ ಮುರಿಯಲಿದ್ದಾರೆಯೇ? ಮತ ಎಣಿಕೆ ಪೂರ್ಣಗೊಂಡ ಮೇಲೆ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಒಂದು ವೇಳೆ ಇದು ಸಾಧ್ಯವಾದರೆ ಜಾರ್ಖಂಡ್‌ನ 19 ವರ್ಷಗಳ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿಯೂ ಉಳಿದುಕೊಳ್ಳುತ್ತದೆ.

2014ರ ಚುನಾವಣೆಯಲ್ಲಿ ಬಿಜೆಪಿ ರಘುವರ ದಾಸ್ ಜೇಮ್‌ಶೆಡ್‌ಪುರ ಪೂರ್ವ ಕ್ಷೇತ್ರದಲ್ಲಿ 70 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು.

19 ವರ್ಷಗಳಲ್ಲಿ 6 ಮುಖ್ಯಮಂತ್ರಿಗಳು

ನವೆಂಬರ್ 15, 2000ನೇ ಇಸವಿಯಲ್ಲಿ ಬಿಹಾರವನ್ನು ವಿಭಜಿಸಿ ಜಾರ್ಖಂಡ್ ರೂಪಿಸಲಾಯಿತು.ಮೂರು ವಿಧಾನಸಭಾ ಚುನಾವಣೆಗಳನ್ನು ಕಂಡಿರುವ ಜಾರ್ಖಂಡ್‌ನಲ್ಲಿ6 ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ.ಬಾಬುಲಾಲ್ ಮರಾಂಡಿ, ಅರ್ಜುನ್ ಮುಂಡಾ, ಶಿಬು ಸೊರೆನ್, ಮಧು ಕೊಡಾ, ಹೇಮಂತ್ ಸೊರೆನ್ ಮತ್ತು ರಘುವರ ದಾಸ್‌ ಈ ಹಿಂದೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು.

ಸೋತ ಮುಖ್ಯಮಂತ್ರಿ ಶಿಬು ಸೊರೆನ್

ಜಾರ್ಖಂಡ್‌ನ ಯಾವುದೇ ಮುಖ್ಯಮಂತ್ರಿ ಚುನಾವಣೆಯಲ್ಲಿ ಸತತ ಜಯ ದಾಖಲಿಸಿಲ್ಲ. ಆಗಸ್ಟ್‌ 27, 2008ರಲ್ಲಿ ಮುಖ್ಯಮಂತ್ರಿ ಮಧು ಕೋಡಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಜಾರ್ಖಂಡ್ ಮುಕ್ತಿ ಮೋರ್ಚಾದ ಅಧ್ಯಕ್ಷ ಶಿಬು ಸೊರೆನ್ಮುಖ್ಯಮಂತ್ರಿಯಾದರು.

ಆರು ತಿಂಗಳೊಳಗೆ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಬೇಕೆಂದು ಒತ್ತಡ ಅವರ ಮೇಲಿತ್ತು. ತಮಾಸ್‌ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಿಬು ಸೊರೇನ್ ಅವರನ್ನು ಜಾರ್ಖಂಡ್ ಪಾರ್ಟಿಯ ಪೀಟರ್ ರಾಜಾ 8,973 ಮತಗಳ ಅಂತರದಿಂದಸೋಲಿಸಿದ್ದರು. ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

2014ರ ಚುನಾವಣೆಯ ದಾಖಲೆ

2014ರ ಜಾರ್ಖಂಡ್ ಚುನಾವಣೆಯು ಮಾಜಿ ಮುಖ್ಯಮಂತ್ರಿಗಳನ್ನು ಅಕ್ಷರಶಃ ಕಂಗಾಲಾಗಿಸಿತ್ತು.

ಧನ್ವಾರ್ ಮತ್ತು ಗಿರಿಭ್ ಕ್ಷೇತ್ರಗಳಿಂದ 2014ರಲ್ಲಿ ಜಾರ್ಖಂಡ್‌ನಮೊದಲ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಸೋತರು. ಈ ಬಾರಿಯೂ ಧನ್ವಾರ್ ಕ್ಷೇತ್ರದಿಂದಲೇಮರಾಂಡಿ ಸ್ಪರ್ಧಿಸಿದ್ದಾರೆ

ಕೇಂದ್ರ ಸಚಿವ ಅರ್ಜುನ್ ಮುಂಡ ಮೂರು ಬಾರಿ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಅವರೂ 2014ರಲ್ಲಿ ಖಾರ್‌ಸಾವನ್ ಕ್ಷೇತ್ರದಲ್ಲಿ ಸೋಲನುಭವಿಸಿದ್ದರು.ಮಝ್‌ಗಾವ್‌ನಲ್ಲಿ ಮಾಜಿ ಮುಖ್ಯಮಂತ್ರಿ ಮಧು ಕೋಡ ಸೋತಿದ್ದರು.

ದುಮ್ಕಾ ಮತ್ತು ಬರ್ಹೈತ್ ಕ್ಷೇತ್ರಗಳಿಂದ2014ರಲ್ಲಿ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್‌ ಸೊರೆನ್ಸ್ಪರ್ಧಿಸಿದ್ದರು. ದುಮ್ಕಾದಲ್ಲಿ ಸೋತು, ಬರ್ಹೈತ್‌ನಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರು ದುಮ್ಕಾ ಮತ್ತು ಬರ್ಹೈತ್‌ ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ.

ರಘುಬರ್ ದಾಸ್ ಗೆಲ್ಲುತ್ತಾರೆಯೇ?

ಜೇಮ್‌ಶೆಡ್‌ಪುರ ಪೂರ್ವ ಕ್ಷೇತ್ರದಿಂದ ರಘುವರ ದಾಸ್ ಸ್ಪರ್ಧಿಸಿದ್ದಾರೆ. ಇಲ್ಲಿ ತಮ್ಮದೇ ಸಂಪುಟದಲ್ಲಿದ್ದ ಮಾಜಿ ಸಚಿವ ಸರಯು ರೈ ಮತ್ತು ಕಾಂಗ್ರೆಸ್‌ನ ಪ್ರಭಾವಿ ನಾಯಕಗೌರಭ್ ವಲ್ಲಭ್‌ ಅವರನ್ನು ರಘುಬರ್ ಎದುರಿಸುತ್ತಿದ್ದಾರೆ.

ಜೇಮ್‌ಶೆಡ್‌ಪುರ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವ ಗಣನೀಯ ಪ್ರಮಾಣದಲ್ಲಿದೆ. ರಘುವರ ದಾಸ್‌ ಈ ಕ್ಷೇತ್ರದಲ್ಲಿ 1995ರಿಂದ ಸತತ ಜಯಗಳಿಸಿದ್ದಾರೆ. ಈ ಬಾರಿ ಅವರು 6ನೇ ಸಲ ಇದೇ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT