ಮತ ಚಲಾಯಿಸಿ ಗಮನ ಸೆಳೆದ ವಿಶ್ವದ ಕುಬ್ಜ ಮಹಿಳೆ ಜ್ಯೋತಿ ಅಮ್ಗೆ

ಶನಿವಾರ, ಏಪ್ರಿಲ್ 20, 2019
29 °C

ಮತ ಚಲಾಯಿಸಿ ಗಮನ ಸೆಳೆದ ವಿಶ್ವದ ಕುಬ್ಜ ಮಹಿಳೆ ಜ್ಯೋತಿ ಅಮ್ಗೆ

Published:
Updated:

ನಾಗ್ಪುರ: ವಿಶ್ವದ ಅತ್ಯಂತ ಕುಬ್ಜ ಮಹಿಳೆ, ಕೇವಲ 63 ಸೆಂ.ಮೀ. ಎತ್ತರವಿರುವ ಮಹಾರಾಷ್ಟ್ರದ ಜ್ಯೋತಿ ಆಮ್ಗೆ ಅವರು ನಾಗ್ಪುರದಲ್ಲಿ ಗುರುವಾರ ಮತ ಚಲಾಯಿಸಿ ಗಮನ ಸೆಳೆದರು.

ಎರಡು ಅಡಿ ಒಂದು ಇಂಚು ಎತ್ತರದ ಆಮ್ಗೆ, ಸರತಿ ಸಾಲಿನಲ್ಲಿ ಸಾಗಿ ತಮ್ಮ ಹಕ್ಕು ಚಲಾಯಿಸಿದರು. ಮಾತ್ರವಲ್ಲದೆ, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.

ಶಾಯಿ ಹಾಕಿದ್ದ ಬೆರಳು ತೋರುತ್ತಾ ಮಾಧ್ಯಮಗಳನ್ನುದ್ದೇಶಿಸಿಸಿ ಮಾತನಾಡಿದ ಅವರು, ‘ಮತದಾನ ಮಾಡುವಂತೆ ನಾನು ಎಲ್ಲರಲ್ಲಿಯೂ ಕೇಳಿಕೊಳ್ಳುತ್ತೇನೆ. ಮೊದಲು ಮತ ಚಲಾಯಿಸಿ ನಂತರ ನಿಮ್ಮ ಇತರೆ ಕೆಲಸಗಳನ್ನು ಮಾಡಿ’ ಎಂದು ಕರೆ ನೀಡಿದರು.

ವಿಶ್ವದ ಅತ್ಯಂತ ಕುಬ್ಜ ಮಹಿಳೆ ಖ್ಯಾತಿಯ ಗಿನ್ನಿಸ್‌ ದಾಖಲೆ ಒಡತಿಯಾಗಿರುವ ಆಮ್ಗೆ ಅವರಿಗೀಗ 25 ವರ್ಷ ವಯಸ್ಸು. ಜನಪ್ರಿಯ ಟಿವಿ ಶೋ ಬಿಗ್‌ಬಾಸ್‌ ಸೀಸನ್‌ 6, ಅಮೆರಿಕ ಹಾಗೂ ಇಟಾಲಿಯನ್‌ ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿರುವ ಅವರ ಮೇಣದ ಪ್ರತಿಮೆನ್ನು ಪುಣೆಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !