ಮಂಗಳವಾರ, ಆಗಸ್ಟ್ 3, 2021
20 °C

ಇಂಡಿಯನ್‌–2 ಸೆಟ್‌ ದುರಂತ: ಚೆನ್ನೈ ಪೊಲೀಸರ ಮುಂದೆ ಹಾಜರಾದ ಕಮಲ್ ಹಾಸನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಸೆಟ್‌ ತಯಾರಿಸುವ ವೇಳೆ ಕ್ರೇನ್‌ ಕುಸಿದ ಪರಿಣಾಮ ಮೂವರು ಸಹಾಯ ನಿರ್ದೇಶಕರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಕಮಲ್ ಹಾಸನ್ ಇಂದು ಚೆನ್ನೈ ಪೊಲೀಸರ ಮುಂದೆ ಹಾಜರಾಗಿದ್ದಾರೆ.

ಇಂಡಿಯನ್‌–2 ಚಿತ್ರಕ್ಕೆ ಚೆನ್ನೈ ಹೊರಹೊಲಯದಲ್ಲಿರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಸೆಟ್‌ ತಯಾರಿಸಲಾಗುತ್ತಿತ್ತು. ಆ ಸಂದರ್ಭ ಕ್ರೇನ್‌ ಕುಸಿದು ಮೂವರು ಸಹಾಯಕ ನಿರ್ದೇಶಕರು ಮೃತಪಟ್ಟಿದ್ದರು. 9 ಜನರಿಗೆ ಗಾಯಗಳಾಗಿದ್ದವು. 

ಅಪಘಾತ ಸಂಭವಿಸಿದಾಗ ಕಮಲ್ ಹಾಸನ್ ಸೆಟ್‌ ತಯಾರಿಸುವ ಸ್ಥಳದಲ್ಲಿ ಹಾಜರಿರಲಿಲ್ಲ ಎಂದು ತಿಳಿದುಬಂದಿತ್ತು.

ಕಮಲ್‌ ಹಾಸನ್‌ ಸೇರಿದಂತೆ ಚಿತ್ರಕ್ಕೆ ಸಂಬಂಧಪಟ್ಟ ಹಲವರ ಮೇಲೆ ಚೆನ್ನೈ ಪೊಲೀಸರು  ಪ್ರಕರಣವನ್ನು ದಾಖಲಿಸಿದ್ದರು. 

ಚಿತ್ರದ ನಿರ್ದೇಶಕ ಶಂಕರ್ ಅವರನ್ನು ಚೆನ್ನೈ ಪೊಲೀಸರು ಕಳೆದ ವಾರ ವಿಚಾರಣೆ ನಡೆಸಿದ್ದರು. 

ಇದನ್ನೂ ಓದಿ: ರೇಖಾ ತುಟಿ ಚುಂಬನ: ಕಮಲ ಹಾಸನ್‌ ಕ್ಷಮೆಯಾಚನೆಗೆ ನೆಟ್ಟಿಗರ ಆಗ್ರಹ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು