ಕೋಯಿಕ್ಕೋಡ್ (ಕೇರಳ): ‘ಪೌರತ್ವ ತಿದ್ದುಪಡಿ ಕಾಯಿದೆಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಯಾವ ರಾಜ್ಯವೂ ಹೇಳುವಂತಿಲ್ಲ’ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಕಪಿಲ್ ಸಿಬಲ್ ಶನಿವಾರ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ಕೇರಳ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು, ‘ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ನಲ್ಲಿ ಅಂಗೀಕರಿಸಲಾಗಿದ್ದು, ಈಗ ಕಾಯಿದೆ ರೂಪ ಪಡೆದುಕೊಂಡಿದೆ. ಹೀಗಾಗಿ ಇದನ್ನು ಎಲ್ಲ ರಾಜ್ಯಗಳು ಅನುಷ್ಠಾನ ಮಾಡಲೇಬೇಕು. ಮಾಡದಿದ್ದರೆ ಅದು ಅಸಾಂವಿಧಾನಿಕ ನಡೆಯಾಗುತ್ತದೆ’ ಎಂದರು.

‘ಕೆಲವು ರಾಜ್ಯಗಳು ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ವಿರುದ್ಧ ಧ್ವನಿ ಎತ್ತಿವೆ. ಇವುಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುವುದಿಲ್ಲ ಎಂದೂ ಹೇಳುತ್ತಿವೆ. ಇಂತಹ ವಾದ ಎಷ್ಟರ ಮಟ್ಟಿಗೆ ವಾಸ್ತವಿಕ ಎಂಬುದು ಗೊತ್ತಿಲ್ಲ. ಆದರೆ, ಸಂಸತ್ ರೂಪಿಸಿದ ಕಾಯಿದೆಯನ್ನು ಅನುಷ್ಠಾನ ಮಾಡುವುದಿಲ್ಲ ಎಂದು ಹೇಳುವುದು ರಾಜ್ಯಗಳ ಪಾಲಿಗೆ ಕಷ್ಟವಾಗಲಿದೆ’ ಎಂದು ವಿವರಿಸಿದರು.

‘ಸುಪ್ರಿಂ’ಗೆ ಮೊರೆ: ಕೇಂದ್ರ ಜಾರಿಗೆ ತಂದಿರುವ ಸಿಎಎ ತಾರತಮ್ಯದಿಂದ ಕೂಡಿದೆ. ಹೀಗಾಗಿ ಕಾಯಿದೆಯನ್ನು ರದ್ದುಗೊಳಿಸುವಂತೆ ಕೋರಿ ಎಸ್ಎಫ್ಐ ಸುಪ್ರೀಂಕೋರ್ಟ್ಗೆ ಶನಿವಾರ ಮನವಿ ಸಲ್ಲಿಸಿದೆ.

ಇನ್ನಷ್ಟು...

Explainer | ಏನಿದು ಪೌರತ್ವ ತಿದ್ದುಪಡಿ ಮಸೂದೆ?

ಸಂಪಾದಕೀಯ | ಪೌರತ್ವ ಮಸೂದೆ–ಧರ್ಮ ನಿರಪೇಕ್ಷ ಪರಂಪರೆಗೆ ಕಪ್ಪುಚುಕ್ಕೆ

ಪೌರತ್ವ ಮಸೂದೆ ಸಂವಿಧಾನಬದ್ಧ: ಹರೀಶ್ ಸಾಳ್ವೆ ನೀಡುವ 10 ಕಾರಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.