ಗುರುವಾರ , ಜೂಲೈ 2, 2020
28 °C

ಕೇರಳದಲ್ಲಿ ಸಮುದಾಯ ಪ್ರಸರಣದ ಅಂಚಿನಲ್ಲಿದೆ ಕೊರೊನಾ: ಪಿಣರಾಯಿ ವಿಜಯನ್ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Pinarayi Vijayan

ತಿರುವನಂತಪುರ: ಕೇರಳದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕವು ಇನ್ನೂ ಸಮುದಾಯ ಪ್ರಸರಣ ಹಂತ ತಲುಪಿಲ್ಲ. ಆದರೆ ಅದರ ಅಂಚಿನಲ್ಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದ್ದಾರೆ.

ಒಂದೇ ದಿನ ರಾಜ್ಯದಲ್ಲಿ ಅತಿಹೆಚ್ಚು ಪ್ರಕರಣ ಪತ್ತೆಯಾದ ಬೆನ್ನಲ್ಲೇ ಅವರು ಈ ಎಚ್ಚರಿಕೆ ನೀಡಿದ್ದಾರೆ. ನಿಗಾದಲ್ಲಿರುವ ಜನರು ಆರೋಗ್ಯ ಮಾರ್ಗಸೂಚಿಯನ್ನು ನಿರ್ಲಕ್ಷಿಸಿದರೆ ರಾಜ್ಯವು ಸಮುದಾಯ ಪ್ರಸರಣದತ್ತ ಸಾಗಬಹುದು. ಈವರೆಗೆ ಸಾಧಿಸಿದ ನಿಯಂತ್ರಣವನ್ನೆಲ್ಲ ಕಳೆದುಕೊಳ್ಳಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

ಮಂಗಳವಾರ ರಾಜ್ಯದಾದ್ಯಂತ 67 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 963 ತಲುಪಿದೆ. ನಿಗಾದಲ್ಲಿರುವವರ ಸಂಖ್ಯೆ ಲಕ್ಷ ದಾಟಿದೆ.

ಇದನ್ನೂ ಓದಿ: 

ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೆಂಪು ವಲಯಗಳಿಂದ ಬರುವವರು ಸೋಂಕು ಹರಡುವ ಅಪಾಯವಿದೆ. ಜನರು, ಅದರಲ್ಲೂ ಕ್ವಾರಂಟೈನ್‌ನಲ್ಲಿರುವವರು ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಸಮುದಾಯ ಪ್ರಸರಣದ ಅಪಾಯ ಹೆಚ್ಚಿದೆ. ಕೆಂಪು ವಲಯಗಳಿಂದ ಬರುವವರು ರೂಮ್ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಹೇಳಿದ್ದಾರೆ.

ವಿದೇಶಗಳಿಂದ ಬರುವವರು 7 ದಿನಗಳ ಸರ್ಕಾರಿ ಕ್ವಾರಂಟೈನ್‌ ಸೌಲಭ್ಯಕ್ಕಾಗಿ ಪಾವತಿ ಮಾಡಬೇಕು. ಲಕ್ಷಾಂತರ ಮಂದಿ ವಿದೇಶಗಳಿಂದ ಕೇರಳಕ್ಕೆ ಬರಲು ಬಯಸುತ್ತಿದ್ದಾರೆ. ಅವರನ್ನೆಲ್ಲ ನಿಭಾಯಿಸುವುದು ರಾಜ್ಯ ಸರ್ಕಾರಕ್ಕೆ ಕಷ್ಟವಾಗಬಹುದು ಎಂದೂ ಪಿಣರಾಯಿ ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕು ಪರೀಕ್ಷೆ: ₹4,500ರ ಮಿತಿ ತೆಗೆದುಹಾಕಿದ ಐಸಿಎಂಆರ್

ಆದಾಗ್ಯೂ, ಜನರು ಭೀತರಾಗಬೇಕಿಲ್ಲ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಕ್ವಾರಂಟೈನ್ ಸೌಲಭ್ಯ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಮಂಗಳವಾರ ದೃಢಪಟ್ಟ 67 ಪ್ರಕರಣಗಳಲ್ಲಿ 27 ಮಂದಿ ವಿದೇಶಗಳಿಂದ ಮತ್ತು 33 ಜನ ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು