ಕೇರಳದಲ್ಲಿ ಇಲಿಜ್ವರ ಭೀತಿ

7

ಕೇರಳದಲ್ಲಿ ಇಲಿಜ್ವರ ಭೀತಿ

Published:
Updated:

ತಿರುವನಂತಪುರ: ಭಾರಿ ಪ್ರವಾಹದಿಂದ ತತ್ತರಿಸಿದ್ದ ಕೇರಳದಲ್ಲೀಗ ಇಲಿಜ್ವರದ ಭೀತಿ ವ್ಯಾಪಿಸಿದೆ. ಈ ರೋಗದಿಂದ ಮೂವರು ಭಾನುವಾರ ಮೃತಪಟ್ಟಿದ್ದಾರೆ. ಹಾಗಾಗಿ ರಾಜ್ಯ ಆರೋಗ್ಯ ಇಲಾಖೆಯು ಇಲಿಜ್ವರ ತಡೆಗಾಗಿ ವಿವಿಧ ಕ್ರಮಗಳನ್ನು ಕೈಗೊಂಡಿದೆ.

ಆಗಸ್ಟ್‌ 1ರಿಂದ ಸೆಪ್ಟೆಂಬರ್‌ 2ರ ಅವಧಿಯಲ್ಲಿ 10 ಜನರು ಇಲಿಜ್ವರದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಎಲ್ಲ ಹತ್ತು ಸಾವಿನ ಪ್ರಕರಣಗಳು ಶನಿವಾರ ಮತ್ತು ಭಾನುವಾರ ವರದಿಯಾಗಿವೆ. ಎರಡೇ ದಿನಗಳಲ್ಲಿ 73 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಮೃತಪಟ್ಟವರು ಮಲಪ್ಪುರ ಮತ್ತು ಕೋಯಿಕ್ಕೋಡ್‌ ಜಿಲ್ಲೆಯವರು. ರಾಜ್ಯದಲ್ಲಿ ಈಗಲೂ 19,524 ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !